ಮುಂದಿನ ವಾರದಿಂದ ಯುರೋಪ್ ಪ್ರವಾಸ ಕೈಗೊಳ್ಳಲು ಉದ್ದೇಶಿಸಿದ್ದ ಸಿದ್ದರಾಮಯ್ಯ ತಮ್ಮ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದ್ದಾರೆ.

ಬೆಂಗಳೂರು : ಮುಂದಿನ ವಾರದಿಂದ ಯುರೋಪ್ ಪ್ರವಾಸ ಕೈಗೊಳ್ಳಲು ಉದ್ದೇಶಿಸಿದ್ದ ಸಿದ್ದರಾಮಯ್ಯ ತಮ್ಮ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಒಂದು ವೇಳೆ ಸಂಗಡಿಗರ ಜೊತೆ ವಿದೇಶ ಪ್ರವಾಸಕ್ಕೆ ತೆರಳಿದ್ದಾಗ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಆದರೂ ಆಗಬಹುದು. ಆಗ ತಮಗೆ ಸಿಎಂ ಹುದ್ದೆ ಕೈತಪ್ಪಲಿದೆ. 

ಅದರ ಬದಲು ರಾಜ್ಯದಲ್ಲೇ ಇದ್ದರೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶ ಬಂದರೂ ಬರಬಹುದು ಎಂದು ಸಿದ್ದರಾಮಯ್ಯ ಲೆಕ್ಕಚಾರ ಹಾಕಿದ್ದಾರೆ. 

ಇದೇ ವೇಳೆ ಸಿದ್ದರಾಮಯ್ಯ ಜೊತೆ ತೆರಳುವ ಶಾಸಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಯಡಿಯೂಪ್ಪ ಎರಡು ದಿನ ಮೊದಲೇ ಯುರೋಪ್‌ಗೆ ತೆರಳಲು ಟಿಕೆಟ್‌ಗಳನ್ನು ಕಾಯ್ದಿರಿಸಿ ಪೇಚಿಗೆ ಸಿಲುಕಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.