ಮಡಿಕೇರಿ (ಮೇ. 08): ಕೊಡಗಿನಲ್ಲಿ ಎರಡು ದಿನದ ವಾಸ್ತವ್ಯ ಮುಗಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರನೊಂದಿಗೆ ಮಂಗಳವಾರ ಹಿಂತಿರುಗಿದ್ದಾರೆ.

ಭಾನುವಾರ ಸಂಜೆ 5.30 ಕ್ಕೆ ಮಡಿಕೇರಿಯ ಹೊರ ವಲಯದಲ್ಲಿರುವ ಇಬ್ಬನಿ ರೆಸಾರ್ಟ್‌ಗೆ ಪುತ್ರ ಯತೀಂದ್ರ ಜೊತೆ ಆಗಮಿಸಿದ್ದ ಸಿದ್ದರಾಮಯ್ಯ, ಎರಡು ದಿನ ರೆಸಾರ್ಟ್‌ನಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗೆ 11.40 ಕ್ಕೆ ರೆಸಾರ್ಟ್‌ನಿಂದ ಮೈಸೂರಿಗೆ ತೆರಳಿದರು. ರೆಸಾರ್ಟ್ ವಾಸ್ತವ್ಯದ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿದ್ದರಾಮಯ್ಯ, ‘ದಯವಿಟ್ಟು ಕಾಯಬೇಡಿ, ಹೋಗಿ ಇನ್ಮೇಲೆ’ ಎಂದಷ್ಟೇ ಹೇಳಿ ಮೈಸೂರು ಕಡೆ ತೆರಳಿದರು.