ಒಂದು ಕಡೆ ದೋಸ್ತಿ ಸರಕಾರದ ಸಂಪುಟ ಸಹ ವಿಸ್ತರಣೆಯಾಗಿದೆ. ಆದರೆ ಆಪರೇಶನ್ ಕಮಲ ವಿಚಾರ ಮಾತ್ರ ದೂರಕ್ಕೆ ಸರಿದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸಹ ಮತ್ತೆ ಮಾತನಾಡಿದ್ದಾರೆ.

ಬೆಂಗಳೂರು[ಡಿ.30] ಕುದುರೆ ವ್ಯಾಪಾರಕ್ಕೆ ನಿಂತಿರುವ ಬಿಜೆಪಿ ಪ್ರತಿ ಶಾಸಕರಿಗೆ ರೂ.25 ರಿಂದ 30 ಕೋಟಿ ಹಣ ನೀಡಿ ಖರೀದಿಸಲು ಮುಂದಾಗಿದೆ.‌ ಅವರು ಭ್ರಷ್ಟಾಚಾರಿಗಳಲ್ಲದೇ ಇದ್ದರೆ ಇಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬರುತ್ತದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಬಿಎಸ್‌ವೈ, ಕತ್ತಿ ಅತೃಪ್ತ ಆತ್ಮಗಳು: ಸಿದ್ದು ಕಿಡಿ!

ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿರುವುದು ಒಂದನ್ನು ಬಿಟ್ಟು ವಿರೋಧ ಪಕ್ಷವಾಗಿ ಕರ್ನಾಟಕ ಬಿಜೆಪಿ ಇಷ್ಟು ದಿನ ಬೇರೆ ಏನು ಮಾಡಿದೆ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಸಂಪುಟ ವಿಸ್ತರಣೆ ನಂತರ ರಮೇಶ್ ಜಾರಕಿಹೊಳಿ ದೂರವಾಗಿರುವುದು. ಜೆಡಿಎಸ್ ನಾಯಕರು ಕಾಂಗ್ರೆಸ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ದು,. ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಸಂಬಂಧ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೂ ಮಾತುಕತೆ ನಡೆದಿತ್ತು.

"

Scroll to load tweet…