ಗದಗ, (ಅ.21): ಗದಗ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ನೂತನ ಪೀಠಾಧಿಕಾರಿಯನ್ನ ನೇಮಿಸಲಾಗಿದೆ.

ಗದಗ ತೋಂಟದಾರ್ಯ ಮಠದ ನೂತನ ಪೀಠಾಧಿಪತಿಯಾಗಿ ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಮಹಾಸ್ವಾಮಿಗಳನ್ನು ನೇಮಕ ಮಾಡಲಾಗಿದೆ.

ಹೃದಯಾಘಾತದಿಂದ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ

"

10 ವರ್ಷಗಳ ಹಿಂದೆ ಲಕೋಟೆಯಲ್ಲಿ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಶ್ರೀಗಳ ಹೆಸರನ್ನು ಸಿದ್ದಲಿಂಗ ಸ್ವಾಮೀಜಿಗಳೇ ಬರೆದಿಟ್ಟಿದ್ದರು.

ನಾವು ಪೀಠಾಧ್ಯಕ್ಷರಾದ ಬಳಿಕ ಹಲವು ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಮಠ, ಅದರ ಪರಂಪರೆ ಪ್ರಕಾರ ಬಸವ ತತ್ವ ಪ್ರಚಾರಕ್ಕಾಗಿ ರುದ್ರಾಕ್ಷಿ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಯವರನ್ನು 20ನೇ ಪೀಠಾಧಿಕಾರಿಯಾಗಿ ನೇಮಕ ಮಾಡಬೇಕು ಎಂದು ವಿಲ್​ ಮಾಡಿಟ್ಟಿದ್ದರು ಎನ್ನಲಾಗಿದೆ.