Asianet Suvarna News Asianet Suvarna News

ಆಪರೇಷನ್'ಗೆ ಒಲ್ಲದ ಸಿದ್ದಗಂಗಾ ಶ್ರೀಗಳು; ಸಿದ್ದಗಂಗಾ ಮಠದಲ್ಲೇ ಚಿಕಿತ್ಸೆಗೆ ಪಟ್ಟು

ಡಾ| ಶಿವಕುಮಾರ ಸ್ವಾಮೀಜಿಯವರು ಕರುಳು ಸೋಂಕು, ಮೂತ್ರ ಸೋಂಕು, ಪಿತ್ತನಾಳ ಸಮಸ್ಯೆ ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಅವರ ಲಿವರ್'ಗೆ ಸಾಕಷ್ಟು ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಗತ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ, 110 ವರ್ಷ ವಯಸ್ಸಾಗಿರುವುದರಿಂದ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕೆಂಬ ಗೊಂದಲ ವೈದ್ಯರಲ್ಲಿದೆ ಎನ್ನಲಾಗಿದೆ.

siddaganga mutt swamiji wants him to get treatment at his mutt

ಬೆಂಗಳೂರು(ಮೇ 12): ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿಗಳು ಶಸ್ತ್ರಚಿಕಿತ್ಸೆಗೆ ಹಿಂದೇಟು ಹಾಕುತ್ತಿರುವ ಘಟನೆ ವರದಿಯಾಗಿದೆ. 110 ವರ್ಷದ ಸಿದ್ದಗಂಗಾ ಶ್ರೀಗಳು ತಮ್ಮನ್ನು ಮಠಕ್ಕೆ ವಾಪಸ್ ಕರೆದೊಯ್ಯುವಂತೆ ಕೇಳುತ್ತಿದ್ದಾರೆ. ತಮಗೆ ಚಿಕಿತ್ಸೆ ನೀಡುವುದಿದ್ದರೆ ಸಿದ್ದಗಂಗಾ ಮಠದಲ್ಲೇ ಆಗಲಿ ಎಂದು ಸ್ವಾಮಿಗಳು ಪಟ್ಟು ಹಿಡಿದಿದ್ದಾರೆಂಬ ಮಾತು ಕೇಳಿಬರುತ್ತಿದೆ.

ಡಾ| ಶಿವಕುಮಾರ ಸ್ವಾಮೀಜಿಯವರು ಕರುಳು ಸೋಂಕು, ಮೂತ್ರ ಸೋಂಕು, ಪಿತ್ತನಾಳ ಸಮಸ್ಯೆ ಮತ್ತು ಜ್ವರದಿಂದ ಬಳಲುತ್ತಿದ್ದಾರೆ. ಅವರ ಲಿವರ್'ಗೆ ಸಾಕಷ್ಟು ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಗತ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ, 110 ವರ್ಷ ವಯಸ್ಸಾಗಿರುವುದರಿಂದ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕೆಂಬ ಗೊಂದಲ ವೈದ್ಯರಲ್ಲಿದೆ ಎನ್ನಲಾಗಿದೆ. ಈ ಹಿಂದೆ ಸಿದ್ದಗಂಗಾ ಶ್ರಿಗಳಿಗೆ ಚಿಕಿತ್ಸೆ ನೀಡಿದ್ದ ಸ್ಪರ್ಶ್ ಆಸ್ಪತ್ರೆ ನಿರ್ದೇಶಕ ಡಾ. ವೆಂಕಟರಮಣ ಅವರನ್ನು ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಅವರ ನಿರ್ದೇಶನದಲ್ಲಿ ಚಿಕಿತ್ಸೆ ನಡೆಸುವ ಸಾಧ್ಯತೆ ಇದೆ.

Follow Us:
Download App:
  • android
  • ios