ಶೃತಿ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ ಕಾರಣ ಕಾವೇರಿ ನದಿ ನೀರಿನ ಹೋರಾಟ ಮತ್ತು ಮಹದಾಯಿ ಹೋರಾಟ.
ಬೆಂಗಳೂರು (ಸೆ.16): ಕನ್ನಡ ಚಿತ್ರರಂಗದ ನಟಿ ಶೃತಿ ತಮ್ಮ ಜನ್ಮ ದಿನವನ್ನ ಸರಳವಾಗಿ ಆಚರಿಸಿಕೊಳ್ಳೋಕೆ ನಿರ್ಧರಿಸಿದ್ದಾರೆ. ಪ್ರತಿ ವರ್ಷ ಸಮಾಜ ಮುಖಿ ಕೆಲಸಗಳೊಂದಿಗೆ ಜನ್ಮ ದಿನ ಆಚರಿಸುತ್ತಿದ್ದರು ಶೃತಿ. ಆದರೆ, ಈ ವರ್ಷ ತೀರ ಸರಳವಾಗಿಯೇ ಹುಟ್ಟು ಹಬ್ಬ ಮಾಡಿಕೊಳ್ಳುತ್ತಿರುವುದಾಗಿ ವರಧಿಯಾಗಿದೆ.
ಶೃತಿ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ ಕಾರಣ ಕಾವೇರಿ ನದಿ ನೀರಿನ ಹೋರಾಟ ಮತ್ತು ಮಹದಾಯಿ ಹೋರಾಟ. ಈ ಎರಡೂ ವಿಚಾರದಲ್ಲಿ ಕನ್ನಡಿಗರು ನೊಂದಿದ್ದಾರೆ. ಆ ಹಿನ್ನೆಲೆಯಲ್ಲಿಯೇ ನಟಿ ಶೃತಿ ತೀರ ಸರಳವಾಗಿಯೇ ಜನ್ಮ ದಿನ ಆಚರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಸೆಪ್ಟೆಂಬರ್-18 ರಂದು ತಮ್ಮ ಜನ್ಮ ದಿನವನ್ನು ಕುಟುಂಬ ಸಮೇತ ತುಮಕೂರಿನ ಶ್ರೀ ಶಿವಕುಮಾರ್ ಸ್ವಾಮಿಜಿಗಳ ಸನ್ನಿಧಿಗೆ ತೆರಳಿ. ಅಲ್ಲಿ ಅವರ ಆಶೀರ್ವಾದದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
