ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ಸಿದ್ದರಾಮಯ್ಯ ಒಬ್ಬ ಕಲಬೆರಕೆ ಸಿಎಂ
ಮೈಸೂರು: ಸಿಎಂ ಸಿದ್ದರಾಮಯ್ಯ ಮಗ ರಾಕೇಶ್ ಬೆಲ್ಜಿಯಮ್ ಗೆ ಹೋಗಿದ್ದು ಕುಡಿದು ಡ್ರಗ್ಸ್ ತಗೊಂಡು ಮಜಾ ಮಾಡೋಕೆ ಹೋಗಿದ್ದು. ಆತ ಆರೋಗ್ಯ ತಪಾಸಣೆಗೆ ಬೆಲ್ಜಿಯಂಗೆ ಹೋಗ್ತೇನೆ ಎಂದಾಗ ತಡೆಯಬಹುದಿತ್ತು. ನೀನೆನೂ ಗಣ್ಯನಲ್ಲ, ಯಾವುದೇ ವಿಚಾರ ಸಂಕೀರ್ಣಕ್ಕೆ ನಿನ್ನನ್ನು ಆಹ್ವಾನ ಮಾಡಿಲ್ಲ, ಇಲ್ಲಿ ಉಳಿದು ಆರೋಗ್ಯ ತಪಾಸಣೆ ಮಾಡಿಸಿಕೊ ಎನ್ನ ಬಹುದಿತ್ತು. ಆದ್ರೆ ಅಧಿಕಾರದ ಗುಂಗಿನಲ್ಲಿ ಸಿದ್ದರಾಮಯ್ಯ ತನ್ನ ಮಗನ ಹಿತವನ್ನೇ ಮರೆತ್ರು. ಒಂದು ರೀತಿಯಲ್ಲಿ ಅವರೇ ತಮ್ಮ ಮಗನನ್ನು ಕೊಲೆ ಮಾಡಿದಂತೆ. ಸಿದ್ದರಾಮಯ್ಯ ಅವರೇ ತನ್ನ ಕೈಯಾರೆ ರಾಕೇಶ್ ಕೊಲೆ ಮಾಡಿದ್ದು, ಎಂದು ಬಿಜೆಪಿ ಮುಖಂಡ ವಿ. ಶ್ರೀನಿವಾಸ್ ಪ್ರಸಾದ್ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.
ವರುಣಾ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಶ್ರೀನಿವಾಸದ ಪ್ರಸಾದ್, ಇದು. ಈಗಿರೋ ಉತ್ತರಾಧಿಕಾರಿ ಡಾ.ಯತೀಂದ್ರ ನಿಮ್ಮ ಜೊತೆಯಲ್ಲೇ ಇರಲಿಲ್ಲ. ತನ್ನಷ್ಟಕ್ಕೆ ತಾನು ಬೇರೆ ಮನೆಮಾಡಿಕೊಂಡಿದ್ದ. ನೀವು ಕೂಡ ಆತನ ಬಗ್ಗೆ ಬೇರೆ ರೀತಿ ಹೇಳಿಕೆ ನೀಡ್ತಿದ್ರಿ. ಆತನ ಮುಖ ನೋಡಲ್ಲ ಅಂತಿದ್ರೀ, ಈಗ ಆತನೇ ಬೇಕಾಗಿದ್ದಾನೆ, ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಕರ್ನಾಟಕ ಎಂದೂ ಈತಂಹ ಲಜ್ಜೆಗೆಟ್ಟ ಮುಖ್ಯಮಂತ್ರಿ ನೋಡಿಲ್ಲ, ಮುಖ್ಯಮಂತ್ರಿ ಅಂದ್ರೆ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿ ಇರಬೇಕು. ಸಿಎಂ ಹಾವಭಾವ ನೋಡಿದ್ರೆ ನಾಚಿಕೆಯಾಗುತ್ತದೆ. ಸಿದ್ದರಾಮಯ್ಯ ಒಬ್ಬ ಕಲಬೆರಕೆ ಸಿಎಂ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ನಮ್ಮ ದುರಂತ ಎಂದು ಟೀಕಿಸಿದ್ದಾರೆ.
ವರುಣ ಹೊಸ ಕ್ಷೇತ್ರ ಆದಾಗ ವರುಣಾದಲ್ಲಿ ಸ್ಪರ್ಧೆ ಮಾಡಿ ಎಂದು ಹೇಳಿದ್ದು ನಾನು. ಈಗ ನಿರಾಸೆಯಾಗಿದೆ, ಮನಸ್ಸಿಗೆ ಸಾಕಷ್ಟು ನೋವಾಗಿದೆ. ಸಿದ್ದರಾಮಯ್ಯಗಿಂತ ರಾಜಕಾರಣದಲ್ಲಿ ನಾನೇ ಹಿರಿಯ. ಈ ವರೆಗೂ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ನನ್ನ ಜೀವನದಲ್ಲಿ ಸಿದ್ದರಾಮಯ್ಯ ಮಾಸದ ಗಾಯ ಮಾಡಿದ್ದಾರೆ. ಮಂತ್ರಿಮಂಡಲ ಪುನರ್ ರಚನೆಯಲ್ಲಿ ನನ್ನ ಕೈ ಬಿಟ್ಟಿದ್ದಾರೆ. ಎದ್ದರೆ ಜುಟ್ಟು ಹಿಡಿತಾರೆ, ಕುಳಿತ್ರೆ ಬಾಲ ಹಿಡಿತಾರೆ. ಸಿದ್ದರಾಮಯ್ಯ ತುಂಬಾ ಡೆಂಜರ್ ವ್ಯಕ್ತಿ, ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
