ತುಮಕೂರು(ಎ.01): ಲಕ್ಷಾಂತರ ಭಕ್ತರ ಆರಾಧ್ಯ ವ್ಯಕ್ತಿ, ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠಧ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಇಂದು 110ನೇ ಹುಟ್ಟು ಹಬ್ಬದ ಸಂಭ್ರಮ. ಮಠದ ಅಂಗಳದಲ್ಲಿ ಶ್ರೀಗಳ ಜನ್ಮದಿನದ ಆಚರಣೆಗೆ ಏಗೆಲ್ಲ ಸಿದ್ಧತೆ ನಡೆದಿದೆ? ಇಲ್ಲಿದೆ ವಿವರ​.

ನಡೆದಾಡುವ ದೇವರ 110ನೇ ಜನ್ಮದಿನಾಚರಣೆಗೆ ಭಕ್ತರು ಹರಿದು ಬರ್ತಿದ್ದಾರೆ.. ಎಂದಿನಂತೆ ಶ್ರೀಗಳು ಬೆಳಗ್ಗೆ ಇಷ್ಟಲಿಂಗ ಪೂಜೆ ಮುಗಿಸಿದ ಬಳಿಕ ಮಠದ ಆವರಣದಲ್ಲಿ ಬೆಳಗ್ಗೆ ೧೦.೩೦ಕ್ಕೆ ಸ್ವಾಮೀಜಿಗಳಿಗೆ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯಪಾಲ ವಜುಬಾಯಿ ವಾಲಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಿಜಾಫುರದ ಜ್ಞಾನಯೋಗಾನಂದಾಶ್ರಮದ ಸಿದ್ದೇಶ್ವರ ಸ್ವಾಮೀಜಿ  ಮುಖ್ಯ ಅಥಿತಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಹಾಗೆಯೇ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇನ್ನೂ ಬರುವ ಭಕ್ತರಿಗೆಲ್ಲಾ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಮಠದಲ್ಲಿ 9  ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. 40 ಕ್ವಿಂಟಾಲ್ ಸಿಹಿ ಬೂಂದಿ ಕೂಡ ಮಾಡಲಾಗಿದೆ.

ಈಗಾಗಲೇ ಮಠದ ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ನಡೆದಾಡುವ ದೇವರ ಹುಟ್ಟುಹಬ್ಬದ ಸಂಭ್ರಮಕ್ಕೆ ಭಕ್ತರು ಕಾತುರರಾಗಿದ್ದಾರೆ.. ಇನ್ನೂ  ರಾಜ್ಯಪಾಲರು ಮಠಕ್ಕೆ ಬರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿದೆ.