ಶಿವನಿಗೆ ಕಣ್ಣು ಕಿತ್ತು ಕೊಟ್ಟ ಬೇಡರ ಕಣ್ಣಪ್ಪನ ಹೆಸರು ಹೇಳುವ ಬದಲು ಏಕಲವ್ಯನ ಹೆಸರನ್ನು ಪ್ರಸಾಪಿಸಿದರು.
ಬೆಂಗಳೂರು(ನ.03): ಶಿವನಿಗೆ ಕಣ್ಣು ಕಿತ್ತು ಕೊಟ್ಟಿದ್ದು ಬೇಡರ ಕಣ್ಣಪ್ಪನಾ, ಏಕಲವ್ಯನಾ..? ಮಾಂಸ ಸೇವಿಸಿ ಧರ್ಮಸ್ಥಳದ ಮಂಜುನಾಥೇಶ್ವರನ ದರ್ಶನಕ್ಕೆ ತೆರಳಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುವ ಭರದಲ್ಲಿ ಬಿಜೆಪಿ ಸಂಸದ ಬಿ.ಶ್ರೀರಾಮಲು ನೀಡಿದ ಹೇಳಿಕೆಯೊಂದು ಅಪಹಾಸ್ಯಕ್ಕೀಡಾಗಿದೆ.
ಪರಿವರ್ತನಾ ರಾಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಶಿವನಿಗೆ ಕಣ್ಣು ಕಿತ್ತು ಕೊಟ್ಟ ಬೇಡರ ಕಣ್ಣಪ್ಪನ ಹೆಸರು ಹೇಳುವ ಬದಲು ಏಕಲವ್ಯನ ಹೆಸರನ್ನು ಪ್ರಸಾಪಿಸಿದರು. ಒಂದಲ್ಲ, ಎರಡಲ್ಲ. ಮೂರ್ನಾಲ್ಕು ಬಾರಿ ಏಕಲವ್ಯ ಎಂದೇ ಹೇಳಿದರೆ ಹೊರತು ತಪ್ಪು ಸರಿಪಡಿಸಿಕೊಳ್ಳಲಿಲ್ಲ ಆಗ ಮುಖಂಡರು, ಜನ ಒಂದು ಕ್ಷಣ ಅವಾಕ್ಕಾದರು.
