ಆ್ಯಂಟಿ ರೇಬಿಸ್‌ ಮದ್ದು ಕೊರತೆ: ಪಂಕಜ್‌ ಪಾಂಡೆ| ನೆರೆ ರಾಜ್ಯಗಳ ಸಹಕಾರ ಪಡೆದು ಔಷಧ ಒದಗಿಸಲು ಕ್ರಮ 

ಬೆಂಗಳೂರು[ಜೂ.26]: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಟಿ ರೇಬಿಸ್‌ ಮತ್ತು ಇಮ್ಯುನೊ ಗ್ಲೊಬ್ಯುಲಿನ್‌ ಚುಚ್ಚುಮದ್ದು ಕೊರತೆಯಾಗಿರುವ ಹಿನ್ನೆಲೆ ನೆರೆ ರಾಜ್ಯಗಳ ಸಹಕಾರ ಪಡೆದು ಔಷಧ ಒದಗಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್‌ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂಬಂಧ ಕೇರಳ, ತಮಿಳುನಾಡು, ತೆಲಂಗಾಣಕ್ಕೆ ಪತ್ರ ಬರೆದು ತಮ್ಮಲ್ಲಿ ಲಭ್ಯವಿರುವ ಆ್ಯಂಟಿ ರೇಬಿಸ್‌ ಮತ್ತು ಇಮ್ಯುನೊಗ್ಲೊಬ್ಯುಲಿನ್‌ ಜೌಷಧಗಳನ್ನು ನೀಡುವಂತೆ ಕೋರಲಾಗಿತ್ತು. ಅದರಂತೆ ಜೂ.22ರಂದು ಕೇರಳ ಸರ್ಕಾರದ ಔಷಧ ಸರಬರಾಜು ಸಂಸ್ಥೆಯವರು 10 ಸಾವಿರ ರೇಬಿಸ್‌ ಮತ್ತು 2 ಸಾವಿರ ಇಮ್ಯುನೊಗ್ಲೊಬ್ಯುಲಿನ್‌ ಔಷಧಗಳನ್ನು ನೀಡಲು ಒಪ್ಪಿದ್ದಾರೆ ಎಂದಿದ್ದಾರೆ.

ಇಷ್ಟೇ ಅಲ್ಲದೇ ತಮಿಳುನಾಡು ರಾಜ್ಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ಸಹ 5 ಸಾವಿರ ಆ್ಯಂಟಿ ರೇಬಿಸ್‌ ಚುಚ್ಚುಮದ್ದು ನೀಡಲು ಒಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.