ಶಾಪ್ ಡಿಸ್ಪ್ಲೇಯಲ್ಲಿ ಗಂಟೆಗಟ್ಟಲೇ ಪ್ಲೇ ಆದ ನೀಲಿ ಚಿತ್ರ...ಯಾರೇನು ಮಾಡಕಾಗಿಲ್ಲ!
ಕ್ರೀಡಾ ಸಾಮಗ್ರಿಗಳ ಅಂಗಡಿಯ ಡಿಸ್ಪ್ಲೆ ಮೇಲೆ ನೀಲಿ ಚಿತ್ರ/ ಗಂಟೆಗಳ ಕಾಲ ಪ್ಲೇ ಆದರೂ ಯಾರೂ ಏನು ಮಾಡಕಾಗಿಲ್ಲ/ ಈ ಹ್ಯಾಕರ್ಸ್ ಗಳು ಏನೇನು ಮಾಡ್ತವೋ?
ನ್ಯೂಜಿಲೆಂಡ್[ಸೆ. 29] ಭಾನುವಾರ ಬೆಳಗ್ಗೆ ಅಂಗಡಿ ಮಾಲೀಕರು ಶಾಕ್ ಗೆ ಒಳಗಾಗಿದ್ದರು. ಕ್ರೀಡಾ ಸಾಮಗ್ರಿಗಳ ಅಂಗಡಿಯೊಂದ ಪಬ್ಲಿಕ್ ಡಿಸ್ಪ್ಲೇ ಮೇಲೆ ನೀಲಿ ಚಿತ್ರ ಪ್ಲೇ ಆಗುತ್ತಲೇ ಇತ್ತು!
ನ್ಯೂಜಿಲೆಂಡ್ ನ ಅಕ್ ಲ್ಯಾಂಡ್ ನಲ್ಲಿನ ಈ ಪ್ರಕರಣ ಇದೀಗ ದೊಡ್ಡ ಸುದ್ದಿಯಾಗಿದೆ. ಹ್ಯಾಕರ್ ಗಳ ಕಿತಾಪತಿಯಿಂದ ಹೀಗಾಗಿದ್ದು ಪ್ಲೇ ಆಗುತ್ತಿದ್ದ ನೀಲಿ ಚಿತ್ರವನ್ನು ಗಂಟೆಗಳ ಕಾಲ ನಿಲ್ಲಿಸಲು ಸಾಧ್ಯವಾಗಲಿಲ್ಲ.
ಬೆಳಗ್ಗೆ 8 ಗಂಟೆಗೆ ನೀಲಿ ಚಿತ್ರ ಇದ್ದಕ್ಕಿದಂತೆ ಪ್ಲೇ ಆಗಲು ಆರಂಭಿಸಿದೆ. ಇದು ಗೊತ್ತಾಗಿ ಬದಲಿಸಲು ಸಾಧ್ಯವಾಗದೆ ಅಂತಿಮವಾಗಿ ಸ್ಕ್ರೀನ್ ಆಫ್ ಮಾಡಲಾಗಿದೆ.
ಮೆಟ್ರೋ ನಿಲ್ದಾಣದಲ್ಲಿ ಮುಕ್ತ ಸರಸ, ಪೋರ್ನ್ ಸೈಟ್‌ಗೆ ವಿಡಿಯೋ ಅಪ್‌ಲೋಡ್!...
ಸ್ಟ್ರೀಟ್ ನಲ್ಲಿ ಓಡಾಡಿದ ಮಕ್ಕಳ ಕಣ್ಣಿಗೂ ನೀಲಿ ಚಿತ್ರ ದರ್ಶನವಾಗಿದೆ. ನನ್ನ 7 ವರ್ಷದ ಮಗುವಿನೊಂದಿಗೆ ಈ ಚಿತ್ರ ತೆರೆ ಮೇಲೆ ಪ್ರದರ್ಶನವಾಗುತ್ತಿದ್ದ ವೇಳೆಯೇ ಸ್ಟ್ರೀಟ್ ನಲ್ಲಿ ಪಾಸಾದೆ. ಇದನ್ನು ಸಹಿಸಲು ಖಂಡಿತಾ ಸಾಧ್ಯವಿಲ್ಲ..ತುಂಬಾ ಮುಜುಗರಕ್ಕೆ ಒಳಗಾದೆ ಎಂದು ತಾನ್ಯಾ ಲೀ ಎಂಬುವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದ ನೀಲಿ ಚಿತ್ರ ಪ್ರದರ್ಶನ ಅಂಗಡಿ ಬಾಗಿಲು ತೆರೆದು ಬಂದ್ ಮಾಡುವವರೆಗೆ ಅಂದರೆ ಸುಮಾರು ಎರಡು ಗಂಟೆ ಕಾಲ ಚಾಲ್ತಿಯಲ್ಲಿತ್ತು ಎಂದು ಸೆಕ್ಯೂರಿಟಿ ಗಾರ್ಡ್ ತಿಳಿಸಿದ್ದಾರೆ. ಹ್ಯಾಕರ್ಸ್ ಗಳ ಕೆಲಸದಿಂದಲೇ ಹೀಗಾಗಿದೆ ಎಂದು ಅಂಗಡಿ ಮಾಲೀಕರು ಅಭಿಪ್ರಾಯ ನೀಡಿದ್ದು ಸ್ಥಳೀಯ ಪೊಲೀಸರ ಬಳಿ ಯಾವುದೇ ದೂರು ದಾಖಲಾಗಿಲ್ಲ.