ಅಣ್ಣ-ಅತ್ತಿಗೆಯನ್ನೇ ಶೂಟ್ ಮಾಡಿ ಕೊಂದ ತಮ್ಮ : ಮಡಿಕೇರಿಯಲ್ಲಿ ಭೀಕರ ಕೃತ್ಯ

Shootout In Madikeri
Highlights

ಅಣ್ಣ – ಅತ್ತಿಗೆಯನ್ನು ಗುಂಡಿಕ್ಕಿ ಕೊಂದು ಯುವಕನೋರ್ವ ತಾನೂ ಶೂಟ್ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.  

ಮಡಿಕೇರಿ :  ಅಣ್ಣ – ಅತ್ತಿಗೆಯನ್ನು ಗುಂಡಿಕ್ಕಿ ಕೊಂದು ಯುವಕನೋರ್ವ ತಾನೂ ಶೂಟ್ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.  

ಮಡಿಕೇರಿ ತಾಲೂಕಿನ ಜಿಗ್ಗಾರು ಪ್ರದೇಶದಲ್ಲಿ  ಘಟನೆ ನಡೆದಿದ್ದು, ಅಣ್ಣ ದೇವಯ್ಯ (54) ಅತ್ತಿಗೆ ಪ್ರೇಮಾಗೆ (48)  ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಶೂಟ್ ಮಾಡಿಕೊಂಡಿದ್ದಾನೆ.  ತೀವ್ರ ಗಾಯಗೊಂಡಿದ್ದ ಈತನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ತಿ  ಕಲಹ ಹಿನ್ನೆಲೆಯಲ್ಲಿ ಈ  ಕೃತ್ಯ ಎಸಗಲಾಗಿದೆ.  ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

loader