ಪರೀಕ್ಷಾ ನಕಲಿನ ಕಾರಣಕ್ಕಾಗಿಯೇ ದೇಶಾದ್ಯಂತ ಸುದ್ದಿಯಲ್ಲಿರುವ ಬಿಹಾರದಲ್ಲಿ, ಈ ಬಾರಿ ಅಧಿಕಾರಿಗಳು ನಕಲು ತಡೆಗೆ ಮತ್ತೊಂದು ಕ್ರಮ ಕೈಗೊಂಡಿದ್ದಾರೆ. ಈ ನಿಯಮದ ಅನ್ವಯ, ಫೆ.21ರಂದು ನಡೆಯಲಿರುವ 10ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೂ ಮತ್ತು ಸಾಕ್ಸ್‌ ಧರಿಸದೆ ಚಪ್ಪಲಿ ಧರಿಸಬೇಕೆಂದು ಆದೇಶಿಸಲಾಗಿದೆ.

ಪಾಟ್ನಾ: ಪರೀಕ್ಷಾ ನಕಲಿನ ಕಾರಣಕ್ಕಾಗಿಯೇ ದೇಶಾದ್ಯಂತ ಸುದ್ದಿಯಲ್ಲಿರುವ ಬಿಹಾರದಲ್ಲಿ, ಈ ಬಾರಿ ಅಧಿಕಾರಿಗಳು ನಕಲು ತಡೆಗೆ ಮತ್ತೊಂದು ಕ್ರಮ ಕೈಗೊಂಡಿದ್ದಾರೆ. ಈ ನಿಯಮದ ಅನ್ವಯ, ಫೆ.21ರಂದು ನಡೆಯಲಿರುವ 10ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೂ ಮತ್ತು ಸಾಕ್ಸ್‌ ಧರಿಸದೆ ಚಪ್ಪಲಿ ಧರಿಸಬೇಕೆಂದು ಆದೇಶಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯುವ ಉದ್ದೇಶದಿಂದ ಪರೀಕ್ಷಾ ಮಂಡಳಿ ಈ ನಿರ್ಣಯ ತೆಗೆದುಕೊಂಡಿದೆ. ಈ ಬಾರಿ 17 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದು, ಶೂ ಬದಲಿಗೆ ಚಪ್ಪಲಿ ಧರಿಸುವುದಿಂದ ವಿದ್ಯಾರ್ಥಿಗಳನ್ನು ಪರೀಕ್ಷಿಸಲು ಸುಲಭವಾಗಲಿದೆ ಎಂದು ರಾಜ್ಯ ಶಿಕ್ಷಣ ಸಚಿವ ಕೃಷ್ಣ ನಂದನ್‌ ಪ್ರಸಾದ್‌ ಈ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.