ವೈಶಾಲಿ(ಸೆ.16): ಬಿಹಾರ ಪೊಲೀಸರ ಅಮಾನುಷ ಕಾರ್ಯಶೈಲಿ ಮತ್ತು ಸಂವೇದನಾರಾಹಿತ್ಯ ಮನೋಭಾವ ಇದೀಗ ಇನ್ನೂ ಒಂದು ಪ್ರಕರಣದಲ್ಲಿ ಜಗಜ್ಜಾಹೀರಾಗಿದೆ. ಪೊಲೀಸರೇ ನದಿಯಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರ ಶವದ ಕುತ್ತಿಗೆಗೆ ಹಗ್ಗವನ್ನು ಬಿಗಿದು ಹಲವು ಮೀಟರ್‌ ದೂರಕ್ಕೆ ಅದನ್ನು ಎಳೆದೊಯ್ದದ್ದಿದ್ದಾರೆ.

ಬಿಹಾರದ ವೈಶಾಲಿ ಜಿಲ್ಲೆಯ ಗಂಗಾ ನದಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ತೇಲುತ್ತಿರುವುದನ್ನು ಕಂಡ ಗ್ರಾಮಸ್ಥರು ಒಡನೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಬಂದ ಎರಡು ತಾಸುಗಳ ಬಳಿಕ ಪೊಲೀಸರು ಶವದ ಕುತ್ತಿಗೆಗೆ ಹಗ್ಗವನ್ನು ಬಿಗಿದು ಮೇಲಕ್ಕೆತ್ತಿದರು. ಆ ಬಳಿಕ, ಶವ ಸಾಗಾಟಕ್ಕೆ ಅಂಬುಲೆನ್ಸ್‌ ಇಲ್ಲದ ಕಾರಣ, ಶವದ ಕುತ್ತಿಗೆಗೆ ಹಗ್ಗ ಬಿಗಿದಂತೆಯೇ ಅದನ್ನು ಪೊಲೀಸರು ನೆಲದ ಮೇಲೆ ನೂರಾರು ಮೀಟರ್‌ ದೂರಕ್ಕೆ, ತಮ್ಮ ವಾಹನ ನಿಂತಲ್ಲಿಯ ವರೆಗೆ ಎಳೆದುಕೊಂಡೇ ಹೋಗಿದ್ದಾರೆ.