ಬೆಂಗಳೂರು(ಸೆ.19): ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ 18 ತಿಂಗಳಲ್ಲಿ 108 ಕೆಜಿ ಕರಗಿಸಿದ ಕಥೆ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಆದರೆ, ಈ ಕಥೆ ಅದಕ್ಕೆ ತದ್ವಿರುದ್ಧ. ಯಾಕೆಂದರೆ, ತೂಕ ಇಳಿಸಲು ಹೋಗಿ ಯುವಕನೊಬ್ಬ ಪ್ರಾಣಬಿಟ್ಟ ಧಾರುಣ ಘಟನೆ ಬೆಂಗಳೂರಿನ ನೆಲಮಂಗಲ ಬಳಿ ನಡೆದಿದೆ. ಮೃತನನ್ನು ಗಂಗರಾಜು ಎಂದು ಗುರುತಿಸಲಾಗಿದೆ.
ಗಂಗರಾಜು ದೇಹದ ತೂಕ ಇಳಿಸಲು ಫ್ಯಾಟ್ ಕಟರ್ ಪೌಡರ್ ಕುಡಿಯುತ್ತಿದ್ದ ಅಂತ ಹೇಳಲಾಗಿದೆ. ಆತ ಸೇವಿಸುತ್ತಿದ್ದ ಪೌಡರ್ ಈತನ ಜೀವಕ್ಕೆ ಮುಳುವಾಗಿದೆ ಅಂತ ಅಲ್ಲಿನ ಜನರು ಹೇಳುತ್ತಿದ್ದಾರೆ. ಕಳೆದ 15 ದಿನಗಳಿಂದ ಫ್ಯಾಟ್ ಪೌಡರ್ ಕುಡಿಯುತ್ತಿದ್ದ, ಆದರೆ, ಮೂರು ದಿನದ ಹಿಂದೆ ಸೈಡ್ ಎಫೆಕ್ಟ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಗಂರಾಜು ಮೃತಪಟ್ಟಿದ್ದಾನೆ. ಸದ್ಯ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
