Asianet Suvarna News Asianet Suvarna News

ಕಾವ್ಯಶ್ರೀ ಸಹಪಾಠಿಗಳೊಂದಿಗೆ ಚರ್ಚೆ ನಡೆಸಿದ ವಿ.ಎಸ್.ಉಗ್ರಪ್ಪ: ಬಯಲಾದವು ಆಘಾತಕಾರಿ ಅಂಶಗಳು

ಕಾವ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳ್ವಾಸ್ ವಿದ್ಯಾಸಂಸ್ಥೆಗೆ ವಿ.ಎಸ್.ಉಗ್ರಪ್ಪ ನೇತೃತ್ವದ ತನಿಖಾ ತಂಡ ಮೋಹನ್ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ಮೋಹನ್ ಆಳ್ವರವರ ವಿಚಾರಣೆಯನ್ನು ನಡೆಸಿದ್ದಾರೆ. ಈ ವೇಳೆ ಅನೇಕ ಆಘಾತಕಾರಿ ಅಂಶಗಳು ಬಯಲಾಗಿವೆ.

Shocking Information Revealed About Alvas Educational Foundation

ಮಂಗಳೂರು(ಆ.01): ಕಾವ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳ್ವಾಸ್ ವಿದ್ಯಾಸಂಸ್ಥೆಗೆ ವಿ.ಎಸ್.ಉಗ್ರಪ್ಪ ನೇತೃತ್ವದ ತನಿಖಾ ತಂಡ ಮೋಹನ್ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ಮೋಹನ್ ಆಳ್ವರವರ ವಿಚಾರಣೆಯನ್ನು ನಡೆಸಿದ್ದಾರೆ. ಈ ವೇಳೆ ಅನೇಕ ಆಘಾತಕಾರಿ ಅಂಶಗಳು ಬಯಲಾಗಿವೆ.

ಕಾವ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳ್ವಾಸ್ ವಿದ್ಯಾಸಂಸ್ಥೆಗೆ ವಿ.ಎಸ್.ಉಗ್ರಪ್ಪ ನೇತೃತ್ವದ ತಜ್ಞರು ಹಾಗೂ ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಭೇಟಿ ನೀಡಿತ್ತು. ಈ ವೇಳೆ ಕಾವ್ಯಶ್ರೀ ಸಹಪಾಠಿಗಳೊಂದಿಗೆ ಶಾಲಾ ಕೊಠಡಿಯ ಬಾಗಿಲು ಹಾಕಿ ಮುಕ್ತವಾಗಿ ಮಾತುಕತೆ ನಡೆಸಿದ್ದಾರೆ.

1 ಗಂಟೆಗಳ ಕಾಲ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದ ಉಗ್ರಪ್ಪ 'ಜುಲೈ 20ರಂದು ಆಳ್ವಾಸ್ ಹಾಸ್ಟೆಲ್​ನಲ್ಲಿ ಸಾವನ್ನಪ್ಪಿದ್ದ ಕಾವ್ಯಶ್ರೀ ಕಾಲೇಜಿಗೆ ಭೇಟಿ ನೀಡಿದಾಗ ನನಗೆ ಆಘಾತಕಾರಿ ಮಾಹಿತಿಗಳು ಲಭ್ಯವಾಗಿವೆ. ಮಾಹಿತಿ ಪ್ರಕಾರ ಇದೊಂದು ಅಸ್ವಾಭಾವಿಕ ಸಾವು ಎನಿಸಿತು. ಇದರಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತಿದೆ. ಅಲ್ಲದೇ ಈ ಸಂಸ್ಥೆಗೆ ವಸತಿ ಶಾಲೆ ನಡೆಸುವ ಅನುಮತಿಯಿಲ್ಲ. ಇಲ್ಲಿನ ಹಾಸ್ಟೆಲ್​ಗಳು ಕಾನೂನಿನ ಚೌಕಟ್ಟು ಮೀರಿ ನಡೆಯುತ್ತಿದೆ. ಹಾಸ್ಟೆಲ್ ಸುರಕ್ಷತೆಗೆ ಸಂಬಂಧಿಸಿದ ಕಾನೂನನ್ನು ಗಾಳಿಗೆ ತೂರಲಾಗಿದೆ. ಇಲ್ಲಿರುವ ಸಿಬ್ಬಂದಿಗೆ ಕನಿಷ್ಠ ವೇತನ ಕೂಡ ಕೊಡುತ್ತಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಗೈಡ್​ಲೈನ್ಸ್ ಅನ್ವಯ ಸಮಿತಿಯೂ ಇಲ್ಲ. ಅಲ್ಲದೇ ಅನುಮತಿ ಇಲ್ಲದೇ ಹಾಸ್ಟೆಲ್ ನಡೆಸುವುದು ತಪ್ಪು. ಹೀಗಾಗಿ ಸಂಬಂಧಪಟ್ಟ ಪೊಲೀಸರಿಗೆ ಸೂಕ್ತ ತನಿಖೆಗೆ ಸೂಚಿಸಿದ್ದೇನೆ. ಸಾವಿನಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಸೂಚನೆಯನ್ನೂ ನೀಡಿದ್ದೇನೆ' ಎಂದು ಆಳ್ವಾಸ್ ಸಂಸ್ಥೆಗೆ ಭೇಟಿ ನೀಡಿದ ಬಳಿಕ ತಿಳಿಸಿದ್ದಾರೆ.

 

Follow Us:
Download App:
  • android
  • ios