ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಂ ಸಿಂಗ್ ಜೈಲು ಸೇರಿದ ಬೆನ್ನಲ್ಲೇ, ಮತ್ತೊಬ್ಬ ಸ್ವಯಂ ಘೋಷಿತ ‘ದೇವಕನ್ಯೆ’ ಸುಖ್‌ವೀಂದರ್ ಕೌರ್ ಅಲಿಯಾಸ್ ರಾಧೆ ಮಾ ಸಂಕಷ್ಟಕ್ಕೀಡಾಗಿದ್ದಾರೆ.
ಚಂಡೀಗಢ(ಸೆ.06): ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಂ ಸಿಂಗ್ ಜೈಲು ಸೇರಿದ ಬೆನ್ನಲ್ಲೇ, ಮತ್ತೊಬ್ಬ ಸ್ವಯಂ ಘೋಷಿತ ‘ದೇವಕನ್ಯೆ’ ಸುಖ್ವೀಂದರ್ ಕೌರ್ ಅಲಿಯಾಸ್ ರಾಧೆ ಮಾ ಸಂಕಷ್ಟಕ್ಕೀಡಾಗಿದ್ದಾರೆ.
‘ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಬೆದರಿಕೆ ಮತ್ತು ಇತರ ಅಪರಾ‘ಗಳ ಆಪಾದನೆಯಲ್ಲಿ ರಾಧೇ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ, 2015ರಲ್ಲಿ ಗ್ವಾರಾ ನಿವಾಸಿ ಸುರಿಂದರ್ ಮಿತ್ತಲ್ ದೂರು ದಾಖಲಿಸಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲವಾದುದರಿಂದ, ಮಿತ್ತಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಹಿನ್ನೆಲೆಯಲ್ಲಿ ರಾಧೇ ಮಾ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ನ್ಯಾಯಾಂಗ ನಿಂದನೆ ದಾವೆ ಯಾಕೆ ಕೈಗೊಳ್ಳಬಾರದು ಎಂದು ಕಪುರ್ತಲಾ ಜಿಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪಂಜಾಬ್ ಮತ್ತು ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಹೀಗಾಗಿ ಶೀಘ್ರವೇ ರಾಧೇ ವಿರುದ್ಧ ಎಫ್'ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
