Asianet Suvarna News Asianet Suvarna News

ಸುಹಾನಾ ಬೆಂಬಲಕ್ಕೆ ನಿಂತ ಮಾಜಿ ಸಚಿವೆ ಶೋಭಾ ಕರಂದ್ಲಾಜೆ

ಖಾಸಗಿ ವಾಹಿನಿಯೊಂದರಲ್ಲಿ ಹಿಂdu ಭಕ್ತಿಗೀತೆ ಹಾಡಿದ್ದ ಮುಸ್ಲಿಂ ಯುವತಿ ಸುಹಾನ ಸೈಯದ್'ಗೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಬೆಂಬಲ ನೀಡಿದ್ದಾರೆ.

Shobha Karandlaje Supporting Suhana Syed

ಬೆಂಗಳೂರು(ಮಾ.09): ಖಾಸಗಿ ವಾಹಿನಿಯೊಂದರಲ್ಲಿ ಹಿಂದು ಭಕ್ತಿಗೀತೆ ಹಾಡಿದ್ದ ಮುಸ್ಲಿಂ ಯುವತಿ ಸುಹನಾ ಸೈಯದ್'ಗೆ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಬೆಂಬಲ ನೀಡಿದ್ದಾರೆ.

ನಿನ್ನೆಯಷ್ಟೇ ಈಕೆ ಹಿಂದೂ ಭಕ್ತಿಗೀತೆ ಹಾಡಿದ್ದಳು ಎಂಬ ಕಾರಣದಿಂದ ಸಾಮಾಜಿಕ ಜಾಲಾತಾಣಗಳಲ್ಲಿ ಬೆದರಿಕೆ ಹಾಕಿದ್ದ ವಿಚಾರ ವರದಿಯಾಗಿತ್ತು. ಈ ವೇಳೆ ಹಲವಾರು ಮಂದಿ ಈ ಯುವತಿಯ ಬೆಂಬಲಕ್ಕೆ ನಿಂತಿದ್ದರು. ಇದೀಗ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕೂಡಾ ಈಕೆಯ ಬೆಂಬಲಕ್ಕೆ ನಿಂತಿದ್ದು 'ಸುಹಾನಗೆ ಮತಾಂಧರು ಬೆದರಿಕೆ ಹಾಕುತ್ತಿದ್ದಾರೆ ಆದರೂ ಸಿಎಂ ಸಿದ್ದರಾಮಯ್ಯ ಮಾತನಾಡದೆ, ಮೌನಕ್ಕೆ ಶರಣಾಗಿದ್ದಾರೆ. ಸಿಎಂ ಕೂಡಲೇ ಸುಹಾನ ರಕ್ಷಣೆಗೆ ಕ್ರಮ ಕೈಗೊಳ್ಳಲಿ. ಇದರಲ್ಲೂ ವೋಟ್​ ಬ್ಯಾಂಕ್​ ರಾಜಕಾರಣದ ಯೋಚನೆ ಮಾಡದಿರಲಿ. ಸುಹಾನಗೆ ರಕ್ಷಣೆ ನೀಡಿದರೆ ಮುಸಲ್ಮಾನರಿಗೆ ನೋವಾಗುತ್ತದೆ ಎಂದು ಯೋಚಿಸುವುದು ಬೇಡ. ಸುಹಾನಾ ರಕ್ಷಣೆ ಮಾಡುವುದು ರಾಜ್ಯ ಸರ್ಕಾರದ ಹೊಣೆ. ಸುಹಾನ ಜೊತೆ ನಾವಿದ್ದೇವೆ' ಎಂದು ಬಿಜೆಪಿ ಕಚೇರಿ ಬಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios