ಆಂಜನೇಯ ವಿರುದ್ಧ ಬಹುಕೋಟಿ ಹಗರಣ ಆರೋಪಕ್ಕೆ ದಾಖಲೆ ಬಿಡುಗಡೆ ಮಾಡಿದ ಶೋಭಾ ಕರಂದ್ಲಾಜೆ

First Published 23, Feb 2018, 4:38 PM IST
Shobha Karandlaje Release Document against on Anjaneya
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೇಕಡ 100 ಕ್ಕೆ ನೂರರಷ್ಟು ಭ್ರಷ್ಟಾಚಾರ ನಡೆಸಿದ್ದು, ಅಂಬೇಡ್ಕರ್ ಹೆಸರಿನಲ್ಲಿಯೇ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ದಾಖಲೆ ಬಿಡುಗಡೆ ಮಾಡಿದರು. 

ಬೆಂಗಳೂರು (ಫೆ.23): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೇಕಡ 100 ಕ್ಕೆ ನೂರರಷ್ಟು ಭ್ರಷ್ಟಾಚಾರ ನಡೆಸಿದ್ದು, ಅಂಬೇಡ್ಕರ್ ಹೆಸರಿನಲ್ಲಿಯೇ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ದಾಖಲೆ ಬಿಡುಗಡೆ ಮಾಡಿದರು. 

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಲ್ಲಿ ಬಹುಕೋಟಿ ಹಗರಣ ನಡೆದಿದೆ. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್.ಆಂಜನೇಯ ಸೇರಿದಂತೆ 18 ಅಧಿಕಾರಿಗಳು ಭಾಗಿಯಾಗಿದ್ದಾರೆ ಅಂತಾ ದೂರಿದರು. ರಾಜ್ಯದ ಏಳು ವಿಭಾಗಗಳಲ್ಲಿ ತರಾತುರಿಯಲ್ಲಿ 36 ಕೋಟಿ ರೂ.ವೆಚ್ಚದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಅನ್ನು ಕೊರೆಯಲು ಒಂದೇ ದಿನದಲ್ಲಿ ಆದೇಶ ಹೊರಡಿಸಲಾಗಿದೆ ಎಂದ ಅವರು, ಆಂಜನೇಯ ವಿಧಾನಸಭಾ ಕ್ಷೇತ್ರದ ಹೊಳಲ್ಕೆರೆಯಲ್ಲಿಯೇ, ಒಂದೇ ದಿನ 1,800 ಬೋರ್ ವೆಲ್ ಕೊರೆಸಲು ಜನವರಿ 22 ರಂದು ಆದೇಶ ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಅಂತ ಆಪಾದಿಸಿದರು.ಇನ್ನೂ  ಈ ಬೋರ್ ವೆಲ್ ಕೊರೆಯಲು ಈಗಾಗಲೇ ಹಣ ಬಿಡುಗಡೆ ಮಾಡಲಾಗಿದ್ದು,  ಕೆಪಿಟಿಟಿ ಕಾಯ್ದೆ ಸಂಪೂರ್ಣ ಉಲ್ಲಂಘನೆ ಎಂದು ಗಂಭೀರವಾದ ಆಪಾದನೆ ಮಾಡಿದರು.ಈ ಪ್ರಕರಣವನ್ನು ಸಿಬಿಐಗೆ ವಹಿಸಿ ತನಿಖೆ ನಡೆಸುವಂತೆ ಶೋಭಾ ಕರಂದ್ಲಾಜೆ ಒತ್ತಾಯ ಮಾಡಿದರು. ಕೆಪಿಸಿಸಿ ಅಂದ್ರೆ ಕರ್ನಾಟಕ ಪ್ರದೇಶ ಕರಪ್ಷನ್ ಕಮಿಟಿ ಅಂತಾ ದೂರಿದ ಶೋಭಾ ಕರಂದ್ಲಾಜೆ ಕಾಂಗ್ರೆಸ್ 420 ಆದವರೇ ಸೋಶಿಯಲ್ ಮೀಡಿಯಾದಲ್ಲಿ ಬೇರೆಯವರನ್ನು 420 ಅಂತಾ ಕರೆಯೋದು ತಿರುಗೇಟು ನೀಡಿದರು. ಕಾಂಗ್ರೆಸ್ ಸೋಶಿಯಲ್ ಮೀಡಿಯಾದಲ್ಲಿ 420 ಬಿಜೆಪಿ ಅನ್ನೋ ಪೋಸ್ಟ್ ಹರಿದಾಡುತ್ತಿದೆ. 
 

loader