ರುದ್ರೇಶ್ ಕೊಲೆ ಹಿಂದೆ ಸಚಿವ ರೋಷನ್ ಬೇಗ್ ಕೈವಾಡವಿದೆ. ರೋಶನ್ ಬೇಗ್ ಸುಪಾರಿ ಕೊಟ್ಟು ಆ ಭಾಗದಲ್ಲಿ ಪ್ರಭಾವಿಯಾಗಿ ಬೆಳೆಯುತ್ತಿದ್ದ ರುದ್ರೇಶ್ ಅವರ ಹತ್ಯೆ ಮಾಡಿಸುತ್ತಿದ್ದಾರೆ ಎಂದು ಜನ ಮತ್ತು ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ಬಿಜೆಪಿಗೆ ಮತ್ತು ಸಂಘಪರಿವಾರಕ್ಕೆ ತಡೆಹಾಕಲು ರಾಜಕೀಯ ಹತ್ಯೆ ನಡೆಸಲಾಗಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬೆಂಗಳೂರು(ನ.04): ಆರೆಸ್ಸೆಸ್ ಮುಖಂಡ ರುದ್ರೇಶ್ ಕೊಲೆ ಹಿಂದೆ ಸಚಿವ ರೋಷನ್ ಬೇಗ್ ಕೈವಾಡವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ಧಾರೆ. ಪೊಲೀಸರ ಮಾಹಿತಿ ಪ್ರಕಾರ ಕೊಲೆ ಹಿಂದೆ ಪ್ರಭಾವಿ ರಾಜಕೀಯ ವ್ಯಕ್ತಿಯ ಕೈವಾಡವಿದೆ ಎನ್ನಲಾಗಿತ್ತು. ಸದ್ಯಕ್ಕೆ ರಾಜಕೀಯ ಪ್ರಭಾವ ಹೊಂದಿರುವವರು ಸಚಿವ ರೋಶನ್ ಬೇಗ್. ರೋಷನ್ ಬೇಗ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಶೋಭಾ ಆಗ್ರಹಿಸಿದ್ದಾರೆ.
ಬಿಜೆಪಿ ಪ್ರಶಿಕ್ಷಣ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಕರಂದ್ಲಾಜೆ, ರುದ್ರೇಶ್ ಕೊಲೆ ಹಿಂದೆ ಸಚಿವ ರೋಷನ್ ಬೇಗ್ ಕೈವಾಡವಿದೆ. ರೋಶನ್ ಬೇಗ್ ಸುಪಾರಿ ಕೊಟ್ಟು ಆ ಭಾಗದಲ್ಲಿ ಪ್ರಭಾವಿಯಾಗಿ ಬೆಳೆಯುತ್ತಿದ್ದ ರುದ್ರೇಶ್ ಅವರ ಹತ್ಯೆ ಮಾಡಿಸುತ್ತಿದ್ದಾರೆ ಎಂದು ಜನ ಮತ್ತು ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ಬಿಜೆಪಿಗೆ ಮತ್ತು ಸಂಘಪರಿವಾರಕ್ಕೆ ತಡೆಹಾಕಲು ರಾಜಕೀಯ ಹತ್ಯೆ ನಡೆಸಲಾಗಿದೆ.
ರಾಜ್ಯಸರ್ಕಾರದ ತನಿಖೆಯಿಂದ ಸತ್ಯ ಹೊರಬರಲ್ಲ. ಸಿಐಡಿ ಅಥವಾ ಸಿಓಡಿಯಲ್ಲಿ ನಮಗೆ ನಂಭಿಕೆ ಇಲ್ಲ. ಸಿಬಿಐ ಮತ್ತು ಎನ್`ಐಎ ಮೂಲಕ ತನಿಖೆ ಮಾಡಿಸಬೇಕೆಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದ್ಧಾರೆ.
