ಹುಬ್ಬಳ್ಳಿ[ಮೇ.10]: ರಾಜ್ಯದಲ್ಲಿ ಉಪಚುನಾವಣೆ ಸಮರ ಆರಂಭವಾಗಿದೆ. ಮತದಾರರನ್ನು ಓಲೈಸುತ್ತಿರುವ ರಾಜ್ಯ ನಯಕರು ಪ್ರತಿಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಸದ್ಯ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ ಕುಂದಗೋಳದ ಹಿರೇ ಹರಕುಣಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ 'ಡಿಕೆ ಶಿವಕುಮಾರ್ ಹಣದ ಚೀಲ ಇಟ್ಟುಕೊಂಡು ಚುನಾವಣೆ ಗೆಲ್ಲಲು ಹೊರಟಿದ್ದು ಕಾಂಗ್ರೆಸ್ ಮುಖಂಡರ ಟೈರು ಟೂಬ್ ಗಳನ್ನು ಚುನಾವಣೆ ಸಿಬ್ಬಂದಿ ಚೆಕ್ ಮಾಡಬೇಕು' ಎಂದು ಆಗ್ರಹಿಸಿದ್ದಾರೆ‌.

ಇಷ್ಟೇ ಅಲ್ಲದೇ 'ಕುಂದುಗೋಳ ಮತದಾರರ ಖರೀದಿ ಯತ್ನ ನಡೆದಿದೆ. ಹಣ ಚೆಲ್ಲಿ ಚುನಾವಣೆ ಗೆಲ್ಲಲು ಹೊರಟಿರುವ ಕಾಂಗ್ರೆಸ್ ಮುಖಂಡರ ವಾಹನಗಳ ಟೈರ್ ಡಿಕ್ಕಿಯನ್ನು ಚೆಕ್ ಮಾಡಬೇಕು. ಚುನಾವಣಾಧಿಕಾರಿಗಳು ಕ್ಷೇತ್ರದಲ್ಲಿ ಓಡಾಡುವ ಕಾಂಗ್ರೆಸ್ ವಾಹನಗಳ ಮೇಲೆ‌ ನಿಗಾ ಇಡಬೇಕು. ಡಿಕೆಶಿ ಆಟ ನಡೆಯೋಲ್ಲ ಇಲ್ಲಿ ಆಪರೇಷನ್ ಹಸ್ತ ಸಾಧ್ಯವಿಲ್ಲ’ ಎಂದಿದ್ದಾರೆ.