ಕಂಬಳ ಕ್ರೀಡೆಗೆ ನನ್ನ ಪೂರ್ಣ ಬೆಂಬಲ ಇದೆ. ಜಲ್ಲಿಕಟ್ಟಿನಂತೆ ಕಂಬಳ ಕ್ರೀಡೆಗೂ ಅವಕಾಶ ನೀಡಬೇಕು. ತಮಿಳುನಾಡಿನ ಜನತೆಯಂತೆ ನಾವು ಕೂಡಾ ಒಗ್ಗೂಡಬೇಕು ಎಂದು ನಟ ಶಿವರಾಜ್​​​​ಕುಮಾರ್ ಹೇಳಿದ್ದಾರೆ.

ಬೆಂಗಳೂರು (ಜ.24): ಕಂಬಳ ಪರ ಹೋರಾಟಕ್ಕೆ ಚಿತ್ರರಂಗದ ಗಣ್ಯರು ಕೂಡ ಸಾಥ್ ನೀಡಿದ್ದಾರೆ. ಇತ್ತೀಚೆಗಷ್ಟೆ ನಟ ಜಗ್ಗೇಶ್ ಸುವರ್ಣ ನ್ಯೂಸ್ ಅಭಿಯಾನಕ್ಕೆ ಬೆಂಬಲ ನೀಡಿ ಕಂಬಳ ಪರ ಧ್ವನಿ ಎತ್ತಿದ್ದರು. ಟ್ವೀಟ್ ಮಾಡಿ ಬೆಂಬಲ ಕೂಡ ಸೂಚಿಸಿದ್ದರು.

ಈಗ ನಟ ಶಿವರಾಜ್ ಕುಮಾರ್ ಕಂಬಳ ಪರ ನಿಂತಿದ್ದಾರೆ. ಕಂಬಳ ಕ್ರೀಡೆಗೆ ನನ್ನ ಪೂರ್ಣ ಬೆಂಬಲ ಇದೆ. ಜಲ್ಲಿಕಟ್ಟಿನಂತೆ ಕಂಬಳ ಕ್ರೀಡೆಗೂ ಅವಕಾಶ ನೀಡಬೇಕು. ತಮಿಳುನಾಡಿನ ಜನತೆಯಂತೆ ನಾವು ಕೂಡಾ ಒಗ್ಗೂಡಬೇಕು ಎಂದು ನಟ ಶಿವರಾಜ್​​​​ಕುಮಾರ್ ಹೇಳಿದ್ದಾರೆ.

ಜೊತೆಗೆ ಕಂಬಳ ಪರ ನೂರಾರು ಹೋರಾಟಗಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.