ಕರಾವಳಿ ಬಳಿಕ ಇದೀಗ ಮಲೆನಾಡಲ್ಲೂ ನೈತಿಕ ಪೊಲೀಸ್’ಗಿರಿ

Shivamogga Moral Policing
Highlights

ಕರಾವಳಿ ಪ್ರದೇಶದ ಬಳಿಕ  ಇದೀಗ ಶಿವಮೊಗ್ಗದಲ್ಲಿ ನೈತಿಕ ಪೊಲೀಸ್’ಗಿರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೈಕ್ ತಡೆದು ಮುಸ್ಲಿಂ ಯುವತಿಯನ್ನು ಪ್ರಶ್ನೆ ಮಾಡಿ ಪಾಲಿಕೆ ಸದಸ್ಯ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.

ಶಿವಮೊಗ್ಗ : ಕರಾವಳಿ ಪ್ರದೇಶದ ಬಳಿಕ  ಇದೀಗ ಶಿವಮೊಗ್ಗದಲ್ಲಿ ನೈತಿಕ ಪೊಲೀಸ್’ಗಿರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಿಂದೂ ಯುವಕನ ಬೈಕ್’ನಲ್ಲಿ ತೆರಳುತ್ತಿದ್ದ ಹಿನ್ನೆಲೆ ಬೈಕ್ ಬೈಕ್ ತಡೆದು ಮುಸ್ಲಿಂ ಯುವತಿಯನ್ನು ಪ್ರಶ್ನೆ ಮಾಡಿ ಪಾಲಿಕೆ ಸದಸ್ಯ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.

ಮೊಬೈಲ್ , ಪರ್ಸ್ ಎಲ್ಲವನ್ನು ಕಸಿದುಕೊಂಡು ಮೊಬೈಲ್ ನಲ್ಲಿ ವಿಡೀಯೋ ಮಾಡಿ ನಂತರ ಹಲ್ಲೆ ನಡೆಸಿ ನೈತಿಕ ಪೋಲಿಸ್ ಗಿರಿ ನಡೆಸಿದ್ದಾರೆ. ಈ ವೀಡಿಯೋ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ನಲ್ಲಿ ವೈರಲ್ ಮಾಡಿದ್ದಾರೆ.

ಇಷ್ಟಾಗುತ್ತಿದ್ದಂತೆ ಯುವತಿ ದೊಡ್ಡಪೇಟೆ ಪೋಲಿಸರಿಗೆ ನೀಡಿದ ದೂರಿನನ್ವಯ ಮಜರ್, ಮೊಹಮ್ಮದ್, ಅತೀಕ್ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೋಮು ಸೂಕ್ಷ್ಮ ಪ್ರದೇಶ ಶಿವಮೊಗ್ಗದಲ್ಲಿ ಮುಸ್ಲಿಂ ಯುವಕರ ಗುಂಪೊಂದು ಮತಾಂಧತೆ ಮೆರೆಯುತ್ತಿದ್ದು ಗಲಭೆಗೆ ಕಾರಣವಾಗುತ್ತಿದೆ.

ಇತ್ತಿಚೆಗೆ ಶಿವಮೊಗ್ಗದ ಗಾಂಧಿ ಪಾರ್ಕಿನಲ್ಲಿ ಶಬರೀಶ ಎಂಬಾತನ ಮೇಲೂ ಅನ್ಯ ಕೋಮಿನ ಯುವತಿಯನ್ನು ಮಾತನಾಡಿಸಿದ್ದಕ್ಕೆ ಚಾಕು ಇರಿತವುಂಟಾಗಿತ್ತು.  

loader