ಶಿವಮೊಗ್ಗ[ಡಿ.01]: ಯಡಿಯೂರಪ್ಪ ಚಿಕಿತ್ಸೆಗಾಗಿ ಕೇರಳಕ್ಕೆ ಹೋಗಿಲ್ಲ, ಬದಲಾಗಿ ಸಮ್ಮಿಶ್ರ ಸರ್ಕಾರ ಬೀಳಿಸಲು ಮಾಟ ಮಾಡಿಸಲು ಹೋಗಿದ್ದಾರೆ. ಆದರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಸಾಗರ ಕ್ಷೇತ್ರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದ್ದಾರೆ.

"

ತಂತ್ರ-ಮಂತ್ರ ಮಾಡಲು ಶೋಭ ಜೊತೆ ಯಡಿಯೂರಪ್ಪ ಕೇರಳ ಹೋಗಿದ್ದಾರೆ. ಇವರ ಮಾಟ-ಮಂತ್ರದಿಂದ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗಲ್ಲ ಎಂದಿದ್ದಾರೆ. ಯಡಿಯೂರಪ್ಪ ಪ್ರತಿ ಅಮವಾಸ್ಯೆಗೆ ಕೇರಳಕ್ಕೆ ಹೋಗುತ್ತಾರೆ. ಈಗಾಗಲೇ ಶೋಭ ಕರಂದ್ಲಾಜೆ ಜತೆ ಯಡಿಯೂರಪ್ಪ ಹಲವಾರು ಬಾರಿ ಕೇರಳಕ್ಕೆ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ರೈತನಾಯಕ ಎಂದು ಹೇಳುವ ಯಡಿಯೂರಪ್ಪ ರೈತರ ಬಗ್ಗೆ ಮಾತನಾಡಲು ಯೊಗ್ಯತೆ ಇಲ್ಲ. ರೈತ ನಾಯಕರು ಯಡಿಯೂರಪ್ಪನವರಿಗೆ ಹಸಿರು ಶಾಲು ಹಾಕಿಕೊಳ್ಳಲು ಬಿಡಬಾರದು. ಸುಳ್ಳು ಹೇಳುವುದರಲ್ಲಿ ಅಪ್ಪ-ಮಕ್ಕಳು ಸದಾ ಮುಂದು ಎಂದು ಬೇಳೂರು ವ್ಯಂಗ್ಯವಾಡಿದ್ದಾರೆ.

ಕುಮಾರ್ ಬಂಗಾರಪ್ಪ ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದರಾ..? ಬೇಳೂರು ಖಡಕ್ ಪ್ರಶ್ನೆ

ಇನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ವಿರುದ್ಧ ಹರಿಹಾಯ್ದಿರುವ ಅವರು, ಆಂಜನೇಯ ದಲಿತರ ದೇವರು ಎಂದಿರುವ ಯೋಗಿಗೆ ಹುಚ್ಚು ಹಿಡಿದಿದೆ. ಅಧಿಕಾರದಲ್ಲಿದ್ದವರು ಏನು ಬೇಕಾದರೂ ಹೇಳಬಹುದಾ ಎಂದು ಕಿಡಿಕಾರಿದ್ದಾರೆ.