15 ಲಕ್ಷ ರೂಪಾಯಿ ದರೋಡೆ ನಡೆಸಿದ 9 ನಟೋರಿಯಸ್ ರೌಡಿಗಳ ಗ್ಯಾಂಗೊಂದನ್ನ ಡಿಸಿಐಬಿ ಮತ್ತು ಭದ್ರಾವತಿಯ ನ್ಯೂಟೌನ್ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ಖೆಡ್ಡಾಗೆ ಕೆಡವಿದ್ದಾರೆ. ಬಂಧಿತರನ್ನ ನಟೋರಿಯಸ್ ರೌಡಿ ಬಂಕ್ ಬಾಲು, ಕಾರ್ತಿಕ್‌, ರಘುನಾಥ ಶೆಟ್ಟಿ, ಅಜಯ ಅಲಿಯಾಸ್ ಕರೆಂಟ್, ಅರುಣ್ ಅಲಿಯಾಸ್ ಗೂನು, ರವಿಕಿರಣ, ಫಾರೂಕ್, ಮತ್ತು ಕಿರಣ್ ಎಂದು ಗುರ್ತಿಸಲಾಗುತ್ತಿದೆ.
ಶಿವಮೊಗ್ಗ(ಡಿ.17): ನಮ್ಮತ್ರ ಕಪ್ಪು ಹಣ ಇದೆ..? ನಿಮಗೆ ಲಕ್ಷಕ್ಕಿಷ್ಟು ಅಂತ ಕಮಿಷನ್ ಕೊಡ್ತೇವೆ, ನೀವು ಕಪ್ಪು ಹಣವನ್ನು ವೈಟ್ ಮಾಡಿ ಲಕ್ಷ ಲಕ್ಷ ಕಮಿಷನ್ ಪಡೆಯಿರಿ. ಹೀಗಂತ ಬಣ್ಣದ ಮಾತುಗಳನ್ನ ಆಡಿ ನಂಬಿಸಿ, ಬ್ಲಾಕ್ ಮನಿಗೆ ಬದಲಾಗಿ ಹೊಸ ನೋಟುಗಳನ್ನು ಕೊಡುತ್ತಾರೆ. ಬಳಿಕ ಹೊಸ ನೋಟುಗಳನ್ನ ತೆಗೆದುಕೊಂಡು ಹೋದವರನ್ನು ಅಡ್ಡಗಟ್ಟಿ ಮಚ್ಚು- ಲಾಂಗ್ ತೋರಿಸಿ ಹಣ ದರೋಡೆ ಮಾಡುತ್ತಾರೆ. ಇಂತಹ ಖತರ್ನಾಕ್ ಜಾಲವನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
15 ಲಕ್ಷ ರೂಪಾಯಿ ದರೋಡೆ ನಡೆಸಿದ 9 ನಟೋರಿಯಸ್ ರೌಡಿಗಳ ಗ್ಯಾಂಗೊಂದನ್ನ ಡಿಸಿಐಬಿ ಮತ್ತು ಭದ್ರಾವತಿಯ ನ್ಯೂಟೌನ್ ಪೋಲಿಸರು ಜಂಟಿ ಕಾರ್ಯಾಚರಣೆ ನಡೆಸಿ ಖೆಡ್ಡಾಗೆ ಕೆಡವಿದ್ದಾರೆ. ಬಂಧಿತರನ್ನ ನಟೋರಿಯಸ್ ರೌಡಿ ಬಂಕ್ ಬಾಲು, ಕಾರ್ತಿಕ್, ರಘುನಾಥ ಶೆಟ್ಟಿ, ಅಜಯ ಅಲಿಯಾಸ್ ಕರೆಂಟ್, ಅರುಣ್ ಅಲಿಯಾಸ್ ಗೂನು, ರವಿಕಿರಣ, ಫಾರೂಕ್, ಮತ್ತು ಕಿರಣ್ ಎಂದು ಗುರ್ತಿಸಲಾಗುತ್ತಿದೆ.
