ಸಚಿವ ಸ್ಥಾನ ನನಗೆ ಸಿಕ್ಕೇ ಸಿಗಲಿದೆ : ಸಿ.ಎಸ್‌.ಶಿವಳ್ಳಿ

shivalli is demanding a ministerial post
Highlights

 ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಸಚಿವಗಿರಿ ಕೈತಪ್ಪಿದೆ. ಮತ್ತೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಕುಂದಗೋಳ ಶಾಸಕ ಸಿ.ಎಸ್‌.ಶಿವಳ್ಳಿ ಭರವಸೆ ವ್ಯಕ್ತಪಡಿಸಿದರು. 
 

ಹುಬ್ಬಳ್ಳಿ :  ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಸಚಿವಗಿರಿ ಕೈತಪ್ಪಿದೆ. ಮತ್ತೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಕುಂದಗೋಳ ಶಾಸಕ ಸಿ.ಎಸ್‌.ಶಿವಳ್ಳಿ ಭರವಸೆ ವ್ಯಕ್ತಪಡಿಸಿದರು. 

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ. ಉತ್ತರ ಕರ್ನಾಟಕದ ಹಿಂದುಳಿದ ಏಕೈಕ ನಾಯಕ ನಾನು. ಜಿಲ್ಲೆಯಲ್ಲೂ ಇಬ್ಬರೇ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದು, ಹಿರಿಯನಾಗಿದ್ದೇನೆ. ಪಕ್ಷ ಕಟ್ಟಿದ್ದೇನೆ. ನನಗೆ ಸಚಿವ ಸ್ಥಾನ ಏಕೆ ಸಿಗಲಿಲ್ಲ ಎಂಬುದು ಈವರೆಗೂ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಕ್ಷಿಣ ಕರ್ನಾಟಕದಲ್ಲಿ ಸಚಿವ ಸ್ಥಾನ ಹಂಚಿಕೆಯಾದಂತೆ ಉತ್ತರ ಕರ್ನಾಟಕದಲ್ಲೂ ಸಚಿವ ಸ್ಥಾನ ಹಂಚಿಕೆಯಾಗಬೇಕಿತ್ತು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ಸಚಿವ ಸ್ಥಾನ ಕೈ ತಪ್ಪಿದ ಬಗ್ಗೆ ಕೇಳುವ ಹಕ್ಕು ನನಗಿದೆ. ಹಿರಿಯ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ನ್ಯಾಯ ಕೊಡುತ್ತೇವೆ ಎಂದು ಹೇಳಿದ್ದಾರೆ. ಮತ್ತೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇದೆ ಎಂದರು.

loader