ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚಮಟ್ಟಿಗೆ ಏರುಪೇರು ಉಂಟಾಗಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆದಾಖಲಿಸಲಾಗಿದೆ. ಶ್ರೀಗಳಿಗೆ ಜ್ವರ ಹಾಗೂ ನಿಶ್ಯಕ್ತಿ ಕಾಣಿಸಿಕೊಂಡಿದ್ದು 5 ಜನ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು.  ಶ್ರೀಗಳ ಶ್ವಾಸಕೋಶ, ಜಠರ ಹಾಗೂ ಮೂತ್ರದಲ್ಲಿ ಸೋಂಕು ಇರುವ ಶಂಕೆಯಿದ್ದು ರಕ್ತದ ಮಾದರಿಯನ್ನು ನಿನ್ನೆಯೇ ಬಿಜಿಎಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ರಕ್ತ ಪರೀಕ್ಷೆ ವರದಿಯನ್ನು ಆದರಿಸಿ ಮುಂದಿನ ಚಿಕಿತ್ಸೆ ನೀಡಲಾಗುವುದು ಎಂದು ಬ್ರೈನ್ಸ್ ಹಾಸ್ಪಿಟಲ್‌ ನರರೋಗ ತಜ್ಞ ಡಾ.ವೆಂಕಟರಮಣ ತಿಳಿಸಿದ್ದರು.

ತುಮಕೂರು(ಮೇ.12): ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚಮಟ್ಟಿಗೆ ಏರುಪೇರು ಉಂಟಾಗಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆದಾಖಲಿಸಲಾಗಿದೆ. ಶ್ರೀಗಳಿಗೆ ಜ್ವರ ಹಾಗೂ ನಿಶ್ಯಕ್ತಿ ಕಾಣಿಸಿಕೊಂಡಿದ್ದು 5 ಜನ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಶ್ರೀಗಳ ಶ್ವಾಸಕೋಶ, ಜಠರ ಹಾಗೂ ಮೂತ್ರದಲ್ಲಿ ಸೋಂಕು ಇರುವ ಶಂಕೆಯಿದ್ದು ರಕ್ತದ ಮಾದರಿಯನ್ನು ನಿನ್ನೆಯೇ ಬಿಜಿಎಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ರಕ್ತ ಪರೀಕ್ಷೆ ವರದಿಯನ್ನು ಆದರಿಸಿ ಮುಂದಿನ ಚಿಕಿತ್ಸೆ ನೀಡಲಾಗುವುದು ಎಂದು ಬ್ರೈನ್ಸ್ ಹಾಸ್ಪಿಟಲ್‌ ನರರೋಗ ತಜ್ಞ ಡಾ.ವೆಂಕಟರಮಣ ತಿಳಿಸಿದ್ದರು.

ಶ್ರೀಗಳು ಅನಾರೋಗ್ಯಕ್ಕೆ ತುತ್ತಾಗಿರುವ ಸುದ್ದಿ ತಿಳಿದು ಮಠಕ್ಕೆ ಆಗಮಿಸಿದ ಯಡಿಯೂರಪ್ಪ ಸಿದ್ದಗಂಗಾ ಶ್ರೀಗಳು ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀಗಳು ಆರೋಗ್ಯವಾಗಿದ್ದಾರೆ, ಅವರ ಜೊತೆಗೆ ನಾನು ಮಾತನಾಡಿದ್ದೇನೆ. ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿದೆಯೇ ಎಂದು ವಿಚಾರ ಮಾಡಿದ್ದರು. ಹಣ್ಣು ನೀಡಿ ಆಶೀರ್ವಾದ ಮಾಡಿದ್ದರು. ಭಕ್ತರು ಆತಂಕ ಪಡುವಂತಿಲ್ಲ.., ಶ್ರೀಗಳಿಗೆ ವಿಶ್ರಾಂತಿ ಬೇಕಿದೆ ಭಕ್ತರು ಬಂದು ತೊಂದರೆ ಕೊಡವುದು ಬೇಡ. ಅಲ್ಲದೆ ಮುಂದಿನ ದಿನಗಳಲ್ಲಿ ಶ್ರೀ ಗಳನ್ನು ಪಾದಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುವುದು ಬೇಡವೆಂದಿದ್ದಾರೆ ಎಂದು ತಿಳಿಸಿದ್ದರು.