ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ದಿನ ದಿನಕ್ಕೂ ಕ್ಷೀಣಿಸುತ್ತಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರವನ್ನು ಮುನ್ನಡೆಸಲು ಸಮರ್ಥರಾಗಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಕೊಂಡಾಡಿದ್ದಾರೆ.

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ದಿನ ದಿನಕ್ಕೂ ಕ್ಷೀಣಿಸುತ್ತಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರವನ್ನು ಮುನ್ನಡೆಸಲು ಸಮರ್ಥರಾಗಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಕೊಂಡಾಡಿದ್ದಾರೆ.

‘ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಅಣಕಿಸಲಾಗುತ್ತಿದೆ. ಆದರೆ, ಪ್ರಜೆಗಳೇ ದೇಶದ ಅತಿ ದೊಡ್ಡ ರಾಜಕೀಯ ಶಕ್ತಿ. ಅವರು ಯಾರನ್ನು ಯಾವಾಗ ಬೇಕಾದರೂ, ‘ಪಪ್ಪು ಮಾಡುತ್ತಾರೆ,’ ಎಂದು ಬಿಜೆಪಿಯನ್ನು ಗುರಿಯಾಗಿಸಿ ರಾವುತ್ ಹೇಳಿದ್ದಾರೆ.

ಈ ನಡುವೆ ಪ್ರತಿಯೊಂದು ವಿಚಾರದಲ್ಲೂ ದ್ವಂದ್ವ ನೀತಿ ತೋರುವ ಶಿವಸೇನೆ, ಬಿಜೆಪಿಯೊಂದಿಗೆ ಮೈತ್ರಿ ಮುಂದು ವರಿಸುವ ಬಗ್ಗೆ ನಿರ್ಧರಿಸಲಿ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಶಿವಸೇನೆಗೆ ತಿರುಗೇಟು ನೀಡಿದ್ದಾರೆ.

‘ನಮ್ಮ ಪ್ರತಿ ನಿರ್ಧಾರಗಳನ್ನು ಟೀಕಿಸುವ ಬದಲಿಗೆ ಶಿವಸೇನೆ ನಮಗೆ ಸಲಹೆ ನೀಡಬಹುದು. ಆದರೆ, ಒಂದೇ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಪಾತ್ರಗಳನ್ನು ನಿರ್ವಹಿಸಬಾರದು,’ ಎಂದು ಶಿವಸೇನೆಗೆ ಟಾಂಗ್ ನೀಡಿದ್ದಾರೆ.