ಪ್ರಧಾನಿ ಮೋದಿ ಏಕೆ ರಾಮಜನ್ಮಭೂಮಿಗೆ ಭೇಟಿ ನೀಡಿಲ್ಲ?! ಪ್ರಧಾನಿ ನರೇಂದ್ರ ಮೋದಿ ಮೇಲೆ ಹರಿಹಾಯ್ದ ಮಿತ್ರಪಕ್ಷ ಶಿವಸೇನೆ! ವಿದೇಶಗಳಲ್ಲಿ ಮಸೀದಿಗೆ ಭೇಟಿ ನೀಡೋ ಪ್ರಧಾನಿ ಎಂದು ಮೂದಲಿಸಿದ ಶಿವಸೇನೆ! ಇದುವರೆಗೂ ರಾಮಜನ್ಮಭೂಮಿಗೆ ಕಾಲಿರಿಸದ ಮೋದಿ ಮೇಲೆ ಶಿವಸೇನೆ ಗರಂ! ಸುಗ್ರೀವಾಜ್ಞೆ ಜಾರಿಗಾಗಿ ಹಿಂದೂ ಸಂಘಟನೆಗಳ ಆಗ್ರಹಕ್ಕೆ ಧ್ವನಿಗೂಡಿಸಿದ ಶಿವಸೇನೆ

ಮುಂಬೈ(ನ.8): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಜಾರಿಗೆ ತರುವ ಹಿಂದೂ ಸಂಘಟನೆಗಳ ಬೇಡಿಕೆಗೆ ದನಿಗೂಡಿಸಿರುವ ಶಿವಸೇನೆ, ರಾಮ ಮಂದಿರ ನಿರ್ಮಾಣ ವಿಚಾರವಾಗಿ ಪ್ರಧಾನಿ ನರೆಂದ್ರ ಮೋದಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ. 

ನರೇಂದ್ರ ಮೋದಿ 2014 ರ ಚುನಾವಣೆಯನ್ನು ರಾಮನ ಹೆಸರಿನಲ್ಲಿ ಗೆದ್ದಿದ್ದರು. ಆದರೆ ಮೋದಿ ಈವರೆಗೂ ಕೇದಾರನಾಥಕ್ಕೆ ಮೂರು ಬಾರಿ ಭೇಟಿ ನೀಡಿದ್ದು, ರಾಮಜನ್ಮಭೂಮಿಗೆ ಒಮ್ಮೆಯೂ ಏಕೆ ಭೇಟಿ ನೀಡಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ.

ಮೋದಿ ಸ್ವಕ್ಷೇತ್ರ ವಾರಣಾಸಿಗೂ ಹಲವು ಬಾರಿ ಭೇಟಿ ನೀಡಿದ್ದಾರೆ. ವಿದೇಶಗಳ ಪ್ರವಾಸದಲ್ಲಿ ಮಸೀದಿಗಳಿಗೂ ಭೇಟಿ ನೀಡಿದ್ದಾರೆ. ಆದರೆ ರಾಮಜನ್ಮಭೂಮಿಗೆ ಒಮ್ಮೆಯೂ ಭೇಟಿ ನೀಡಿ ಪೂಜೆ ಸಲ್ಲಿಸಿಲ್ಲ ಶಿವಸೇನೆ ಕಿಡಿಕಾರಿದೆ.


ಪ್ರಧಾನಿಗೆ ಅಯೋಧ್ಯೆ ಹಾಗೂ ರಾಮನ ಬಗ್ಗೆ ನೆನಪೇ ಇಲ್ಲವೇ ಎಂದು ಶಿವಸೇನೆ ಪ್ರಶ್ನಿಸಿದ್ದು, ನರೇಂದ್ರ ಮೋದಿ ಸರ್ಕಾರಕ್ಕೆ ಸೌದಿ ಅರೇಬಿಯಾದಲ್ಲಿ ದೇವಾಲಯ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತದೆ ಆದರೆ ಭಾರತದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ಏಕೆ ಸಾಧ್ಯವಾಗುವುದಿಲ್ಲ ಎಂದು ಕೇಳಿದೆ. 

ಸುಪ್ರೀಂ ಕೋರ್ಟ್ ರಾಮಜನ್ಮಭೂಮಿ ವಿಷಯದ ವಿವಾದದ ಪ್ರಕರಣದ ವಿಚಾರಣೆಯನ್ನು 2019 ಕ್ಕೆ ಮುಂದೂಡಿದ್ದು, ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಜಾರಿಗೆ ತರುವುದಕ್ಕೆ ಹಿಂದೂ ಸಂಘಟನೆಗಳು ಬೇಡಿಕೆ ಮುಂದಿಟ್ಟಿದ್ದವು.