ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಸೀಟಿಲ್ಲವೆಂದು ಎಕಾನಮಿ ಕ್ಲಾಸ್ ನಲ್ಲಿ ಸೀಟು ಕೊಟ್ಟಿದ್ದಕ್ಕೆ ಶಿವಸೇನ ಸಂಸದರೊಬ್ಬರು ವಿಮಾನ ಸಿಬ್ಬಂದಿಗಳಿಗೆ 25 ಬಾರಿ ಚಪ್ಪಲಿಯಲ್ಲಿ ಹೊಡೆದಿರುವ ಅಮಾನವೀಯ ಘಟನೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಡೆದಿದೆ.
ನವದೆಹಲಿ (ಮಾ.23): ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಸೀಟಿಲ್ಲವೆಂದು ಎಕಾನಮಿ ಕ್ಲಾಸ್ ನಲ್ಲಿ ಸೀಟು ಕೊಟ್ಟಿದ್ದಕ್ಕೆ ಶಿವಸೇನ ಸಂಸದರೊಬ್ಬರು ವಿಮಾನ ಸಿಬ್ಬಂದಿಗಳಿಗೆ 25 ಬಾರಿ ಚಪ್ಪಲಿಯಲ್ಲಿ ಹೊಡೆದಿರುವ ಅಮಾನವೀಯ ಘಟನೆ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಡೆದಿದೆ.
ಮಹಾರಾಷ್ಟ್ರದ ಒಸ್ಮನಾಬಾದ್ ಕ್ಷೇತ್ರದಿಂದ ಸಂಸದರಾದ ರವೀಂದ್ರ ಗಾಯಕ್ ವಾಡ್ ವಿಮಾನಯಾನ ಸಿಬ್ಬಂದಿಗಳಿಗೆ ಚಪ್ಪಲಿಯಲ್ಲಿ ಹೊಡೆದು ದಾಷ್ಟ್ಯ ತೋರಿಸಿದ್ದಾರೆ.
ವಿಮಾನ ಎಐ 852 ರಲ್ಲಿ ಪುಣೆಯಿಂದ ದೆಹಲಿಗೆ ಪ್ರಯಾಣಿಸುವಾಗ ಈ ಘಟನೆ ನಡೆದಿದೆ.
“ ಸಂಸದ ರವೀಂದ್ರ ಗಾಯಕ್ ವಾಡ ಬ್ಯುಸಿನೆಸ್ ಕ್ಲಾಸ್ ಕೂಪನ್ ಹೊಂದಿದ್ದರು. ಆದರೆ ಅವರು ಪ್ರಯಾಣಿಸಬೇಕಿದ್ದ ಎಐ1 852 ವಿಮಾನದಲ್ಲಿ ಬ್ಯಸಿನೆಸ್ ಕ್ಲಾಸ್ ಆಸನವಿಲ್ಲ. ಇದು ಎಕಾನಮಿ ಕ್ಲಾಸ್ ವಿಮಾನವೆಂದು ಅವರ ಕಚೇರಿ ಅಧಿಕಾರಿಗಳು ಮುಂಚಿತವಾಗಿ ತಿಳಿಸಿದ್ದರು. ಆದರೂ ಅವರು ಇದೇ ವಿಮಾನದಲ್ಲಿ ತೆರಳಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ವಿಮಾನವು ಲ್ಯಾಂಡ್ ಆದ ಬಳಿಕ ಅರ್ಧಗಂಟೆಗೂ ಹೆಚ್ಚು ಹೊತ್ತು ಅಲ್ಲೇ ಇದ್ದು ಅದರಿಂದ ಿಳಿಯಲು ಗಾಯಕ್ ವಾಡ ಒಪ್ಪಲಿಲ್ಲ. ಇನ್ನೊಂದು ವಿಮಾನಕ್ಕೆ ಅನುವು ಮಾಡಿಕೊಡಬೇಕು ದಯವಿಟ್ಟು ಇಳಿಯಿರಿ ಎಂದು ನಮ್ಮ ಸಿಬ್ಬಂದಿಗಳು ವಿನಂತಿಸಿಕೊಂಡರು. ಇದರಿಂದ ಸಿಟ್ಟಿಗೆದ್ದ ಸಂಸದ ತಮ್ಮ ಚಪ್ಪಲಿಯನ್ನು ತೆಗೆದು ಸಿಬ್ಬಂದಿಗೆ ಹೊಡೆದು ವಿಮಾನದಿಂದ ಹೊರಹೋಗುವಂತೆ ಕೂಗಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
