ಶಿವಸೇನೆಯಿಂದ ರಾಷ್ಟ್ರರಾಜಕಾರಣದಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇರಿಸುತ್ತಿದೆ. ಮಹಾರಾಷ್ಟ್ರದಿಂದ ಅಯೋಧ್ಯೆಗೆ ಹೊಸ ಅಭಿಯಾನವೊಂದನ್ನು ಆರಂಭಿಸಿದೆ. 

ಮುಂಬೈ :  ಶಿವ ಸೇನಾ ಮುಖಂಡ ಉದ್ದವ್ ಠಾಕ್ರೆ ಶೀಘ್ರದಲ್ಲೇ ಉತ್ತರ ಪ್ರದೇಶ ಭೇಟಿಗೆ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ. 

ಮಂಗಳವಾರ ಶಿವ ಸೇನೆ ಮುಖಂಡರು ಚಲೋ ಅಯೋಧ್ಯೆ, ಚಲೋ ವಾರಣಾಸಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಬಣ್ಣಬಣ್ಣದ ಹೋರ್ಡಿಂಗ್ ಗಳು ಹಾಗೂ ಬಣ್ಣದ ಚಿತ್ರಗಳನ್ನು ಹಾಕಲಾಗಿದ್ದು, ಗಂಗಾ ನದಿ, ರಾಮನ ಚಿತ್ರಗಳು ರಾರಾಜಿಸುತ್ತಿವೆ . ಎಲ್ಲರ ಕಣ್ಮನ ಸೆಳೆಯುವಂತೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. 

ಅಲ್ಲದೇ ಈ ಯೋಜನೆಯು ರಾಷ್ಟ್ರ ರಾಜಕಾರಣದ ಮಹತ್ವದ ಬದಲಾವಣೆಯನ್ನು ಕಾಣಲಿದೆ. ಭಾರೀ ಬದಲಾವಣೆಗೆ ಈ ಅಭಿಯಾನ ನಾಂದಿ ಹಾಡಲಿದೆ ಎಂದು ಶಿವ ಸೇನಾ ಮುಖಂಡ ಉದ್ದವ್ ಠಾಕ್ರೆ ಹೇಳಿದ್ದಾರೆ. ಅಯೋಧ್ಯಾ, ಕಾಶಿ, ಗಂಗಾ ನದಿಗೆ ಈ ಅಭಿಯಾನವು ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ.