ಶಿವಸೇನಾ ಮತ್ತು ಬಿಜೆಪಿ ನಡುವಿನ ಅಪಸ್ವರ ಮತ್ತೆ ಭುಗಿಲೆದ್ದಿದೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವ ಬಗ್ಗೆ ಶಿವಸೇನೆ ಸೂಚನೆ ನೀಡಿದೆ.
ಮುಂಬೈ (ಸೆ.18): ಶಿವಸೇನಾ ಮತ್ತು ಬಿಜೆಪಿ ನಡುವಿನ ಅಪಸ್ವರ ಮತ್ತೆ ಭುಗಿಲೆದ್ದಿದೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವ ಬಗ್ಗೆ ಶಿವಸೇನೆ ಸೂಚನೆ ನೀಡಿದೆ.
ಮಹಾರಾಷ್ಟ್ರದಲ್ಲಿ ಬೆಲೆಯೇರಿಕೆ ಹಾಗೂ ರೈತರ ಸಮಸ್ಯೆಯನ್ನೂ ಸರ್ಕಾರ ಇನ್ನೂ ಬಗೆಹರಿಸಿಲ್ಲ. ಇದಕ್ಕೆ ನಾವು ಜಬಾಬ್ದಾರರಲ್ಲ. ಜನರು ಸರ್ಕಾರಕ್ಕೆ ಬೈಯುವುದನ್ನು ನಾವು ಹಂಚಿಕೊಳ್ಳುವುದಿಲ್ಲ. ಬಿಜೆಪಿಯೊಂದಿಗೆ ಮುಂದುವರೆಯಬೇಕಾ, ಬೇಡವಾ ಎನ್ನುವುದರ ಬಗ್ಗೆ ಸದ್ಯದಲ್ಲಿಯೇ ಗೊತ್ತಾಗಲಿದೆ ಎಂದು ಶಿವಸೇನಾ ಮುಖ್ಯಸ್ಥ ಸಂಜಯ್ ರೌತ್ ಹೇಳಿದ್ದಾರೆ.
ಬೆಲೆಯೇರಿಕೆ ವಿಚಾರವಾಗಿ ನಮಗೆ ಜನರನ್ನು ಎದುರಿಸುವುದು ಕಷ್ಟವಾಗಿದೆ. ಬೆಲೆಯೇರಿಕೆಯನ್ನು ನಿಯಂತ್ರಿಸಲು ಬಿಜೆಪಿಗೆ ನಾವು ಮನವಿ ಮಾಡಿಕೊಂಡಿದ್ದೇವೆ. ಸರ್ಕಾರದ ಒಂದು ಭಾಗವಾಗಿದ್ದೇವೆ ಅಂದ ಮಾತ್ರಕ್ಕೆ ನಾವು ಬೆಲೆ ಹೆಚ್ಚಳವನ್ನು ಬೆಂಬಲಿಸುತ್ತೇವೆ ಎಂದರ್ಥವಲ್ಲ. ಮೈತ್ರಿಯನ್ನು ಮುಂದುವರೆಸಬೇಕೆ? ಬೇಡವೇ ಎನ್ನುವುದು ಇನ್ನೂ ಪ್ರಶ್ನಾರ್ಥಕವಾಗಿದೆ ಎಂದು ಸಂಜಯ್ ರೌತ್ ಹೇಳಿದ್ದಾರೆ.
