ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ಎರಡನೇ ಹಂತದ ರಸ್ತೆ ಕಾಂಕ್ರಿಟೀಕರಣ ಕೆಲಸ ಆರಂಭಿಸುವ ಹಿನ್ನೆಲೆಯಲ್ಲಿ ಜ.20ರಿಂದ ಈ ಮಾರ್ಗದಲ್ಲಿ ಎಲ್ಲಾ ಬಗೆಯ ವಾಹನ ಸಂಚಾರ ನಿರ್ಬಂಧಿಸಲು ನಿರ್ಧರಿಸಲಾಗಿದೆ.

ಸಕಲೇಶಪುರ (ಜ.07): ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ಎರಡನೇ ಹಂತದ ರಸ್ತೆ ಕಾಂಕ್ರಿಟೀಕರಣ ಕೆಲಸ ಆರಂಭಿಸುವ ಹಿನ್ನೆಲೆಯಲ್ಲಿ ಜ.20ರಿಂದ ಈ ಮಾರ್ಗದಲ್ಲಿ ಎಲ್ಲಾ ಬಗೆಯ ವಾಹನ ಸಂಚಾರ ನಿರ್ಬಂಧಿಸಲು ನಿರ್ಧರಿಸಲಾಗಿದೆ.

ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಅವರು ಪಟ್ಟಣದಲ್ಲಿ ಶನಿವಾರ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಅಧಿಕಾರಿಗಳು ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಮೇ ಅಂತ್ಯದೊಳಗೆ ಕಾಮಗಾರಿ ಮುಕ್ತಾಯಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು. ಶಿರಾಡಿಘಾಟ್‌ನಲ್ಲಿರುವ 30 ಕಿ.ಮೀ. ರಸ್ತೆ ಪೈಕಿ ಈಗಾಗಲೇ 13 ಕಿ.ಮೀ. ಉದ್ದದ ರಸ್ತೆ ಕಾಮಗಾರಿ 2016ರಲ್ಲೇ ಮುಕ್ತಾಯವಾಗಿದೆ.

6 ಬದಲಿ ಮಾರ್ಗಗಳು ರಾ.ಹೆ. 75ರಲ್ಲಿ ಮಂಗಳೂರಿಂದ ಹಾಸನ-ಬೆಂಗಳೂರು ನಡುವೆ ಸಂಚರಿಸುವ ವಾಹನ ಗಳಿಗೆ 6 ಬದಲಿ ರಸ್ತೆಗಳನ್ನು ಸೂಚಿಸಲಾಗಿದೆ.

ಮಂಗಳೂರಿನಿಂದ ಚಾರ್ಮುಡಿಘಾಟ್, ಅಲ್ಲಿಂದ ಮೂಡಿಗೆರೆ ಮಾರ್ಗ ಹಾಸನ

ಮಂಗಳೂರು- ಮೂಡಿಗೆರೆ- ಜನ್ನಾಪುರ -ಹಾನುಬಾಳ್ ಮಾರ್ಗ ಸಕಲೇಶಪುರ

ಮಂಗಳೂರು- ಮಾಣಿ- ಮಡಿಕೇರಿ- ಹುಣಸೂರು- ಕೆ.ಆರ್ ನಗರ- ಹಾಸನ

ಮಂಗಳೂರು- ಮಡಿಕೇರಿ- ಇಲವಾಲ- ಬೆಂಗಳೂರು

ಉಡುಪಿ- ಕುದುರೆಮುಖ- ಕೊಟ್ಟಿಗೆಹಾರ- ಹಾಸನ- ಬೆಂಗಳೂರು

ಉಡುಪಿ- ಹೊಸ ಅಂಗಡಿ- ಮಾಸ್ತಿಕಟ್ಟೆ- ಹೊಸನಗರ- ಆಯನೂರು