ಜಯಲಲಿತಾ ಅವರಿಗೆ ವೆಂಟಿಲೇಟರ್ ತೆಗೆಯಲಾಗಿದ್ದು, ವೆಂಟಿಲೇಟರ್ ಇಲ್ಲದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಚೆನ್ನೈ(ನ.19): ಸುಮಾರು 2 ತಿಂಗಳು ನಂತರ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅಪೊಲೊ ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ (ಐಸಿಯು) ವಿಶೇಷ ಕೊಠಡಿಗೆ ಶಿಫ್ಟ್ ಆಗಿದ್ದಾರೆ.
ಜಯಲಲಿತಾ ಅವರು ಅಪೊಲೊ ಆಸ್ಪತ್ರೆಯ ಐಸಿಯು ಘಟಕದಿಂದ ವಿಶೇಷ ಕೊಠಡಿಗೆ ಸ್ಥಳಾಂತರಗೊಂಡಿದ್ದಾರೆ'ಎಂದು ಎಡಿಎಂಕೆ ಪಕ್ಷದ ವಕ್ತಾರರಾದ ಸಿ.ಪೊನ್ನಿಯನ್ ತಿಳಿಸಿದ್ದಾರೆ. ನಿನ್ನೆಯಷ್ಟೆ ಅಪೊಲೊ ಆಸ್ಪತ್ರೆಯ ಅಧ್ಯಕ್ಷರಾದ ಡಾ.ಪ್ರತಾಪ್ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಜಯಲಲಿತಾ ಅವರಿಗೆ ವೆಂಟಿಲೇಟರ್ ತೆಗೆಯಲಾಗಿದ್ದು, ವೆಂಟಿಲೇಟರ್ ಇಲ್ಲದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ದಿನಕ್ಕೆ ಕೇವಲ 15 ನಿಮಿಷ ಮಾತ್ರ ವೆಂಟಿಲೇಟರ್ ಅಳವಡಿಸಲಾಗುತ್ತದೆ' ಎಂದು ತಿಳಿಸಿದ್ದರು.
