ಬೆಂಗಳೂರಿನ ಹಲಸೂರಿನಲ್ಲಿ ವಾಸವಾಗಿದ್ದ ಅಳಿಯ ಸೈಯದ್ ಮುಹಮ್ಮದ್  ಇಮ್ರಾನ್ ಮೇಲೆ ದೆಹಲಿಯಲ್ಲಿ ಕೌಟಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.

ನವದೆಹಲಿ/ಬೆಂಗಳೂರು (ನ.13): ಕಾಂಗ್ರೆಸ್ ನಾಯಕಿ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಳಿಯನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಹಲಸೂರಿನಲ್ಲಿ ವಾಸವಾಗಿದ್ದ ಅಳಿಯ ಸೈಯದ್ ಮುಹಮ್ಮದ್ ಇಮ್ರಾನ್ ಮೇಲೆ ದೆಹಲಿಯಲ್ಲಿ ಕೌಟಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.

ಗುರುವಾರ ದೆಹಲಿ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದು, ಇಮ್ರಾನ್’ನನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡೆಸಿದ್ದರು. ಆರೋಪಿಯನ್ನು ಬಾಡಿ ವಾರೆಂಟ್ ಮೇರೆಗೆ ಪೊಲೀಸರು ದೆಹಲಿಗೆ ಕರೆದೊಯ್ದಿದ್ದಾರೆ.

ಶೀಲಾ ದೀಕ್ಷಿತ್ ಅವರ ಮಗಳು ಲತಿಕಾ ಅವರನ್ನು ವಿವಾಹವಾಗಿದ್ದ ಮ್ರಾನ್ 10 ತಿಂಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರವಾಗಿದ್ದರು. ಆ ಬಗ್ಗೆ ದೆಹಲಿಯ ಬಾರಖಂಬಾ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.