ಉತ್ತರಪ್ರದೇಶ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದು ಕಾಂಗ್ರೆಸ್ ಪಕ್ಷದಿಂದ ಸಿಎಂ ಅಭ್ಯರ್ಥಿ ಎಂದು ಬಿಂಬಿಸಲಾಗಿರುವ ಶೀಲಾ ದೀಕ್ಷಿತ್ ಅಖಲೇಶ್ ಯಾದವ್ ರನ್ನು ಶ್ಲಾಘಿಸಿದ್ದಾರೆ.  ನನಗಿಂತ ಅಖಿಲೇಶ್ ಯಾದವ್ ಸಿಎಂ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಹೇಳಿದ್ದಾರೆ.

ಲಕ್ನೋ (ಜ.04): ಉತ್ತರಪ್ರದೇಶ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದು ಕಾಂಗ್ರೆಸ್ ಪಕ್ಷದಿಂದ ಸಿಎಂ ಅಭ್ಯರ್ಥಿ ಎಂದು ಬಿಂಬಿಸಲಾಗಿರುವ ಶೀಲಾ ದೀಕ್ಷಿತ್ ಅಖಲೇಶ್ ಯಾದವ್ ರನ್ನು ಶ್ಲಾಘಿಸಿದ್ದಾರೆ. ನನಗಿಂತ ಅಖಿಲೇಶ್ ಯಾದವ್ ಸಿಎಂ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನಗಿಂತ 30 ವರ್ಷ ಚಿಕ್ಕವನಾದ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದರೆ ನನಗೆ ಸಂತೋಷವಾಗುತ್ತದೆ. ಮುಖ್ಯಮಂತ್ರಿ ಹುದ್ದೆಗೆ ನನಗಿಂತ ಅಖಿಲೇಶ್ ಸೂಕ್ತ ಅಭ್ಯರ್ಥಿ ಎಂದು ಶೀಲಾ ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ.

ಅಖಿಲೇಶ್ ಯಾದವ್ ರ ಶುದ್ಧ ಹಾಗೂ ಜನಪ್ರಿಯತೆ ವ್ಯಕ್ತಿತ್ವ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಸಹಾಯಕವಾಗಬಲ್ಲದು ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.