ಸಿಯೋಲ್(ಆ.18): ದಕ್ಷಿಣ ಕೊರಿಯಾದಲ್ಲಿ ಪ್ರಧಾನಿ ಮೋದಿ ಮತ್ತು ಭಾರತ ವಿರೋಧಿ ಘೋಷಣೆ ಕೂಗಿದ ಪಾಕಿಸ್ತಾನ ಬೆಂಬಲಿಗರಿಗೆ, ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ತಡೆಯೊಡ್ಡಿದ ಘಟನೆ ದ.ಕೊರಿಯಾದ ರಾಜಧಾನಿ ಸಿಯೋಲ್’ನಲ್ಲಿ ನಡೆದಿದೆ.

ಗ್ಲೋಬಲ್ ಸಿಟಿಜನ್ ಫೋರಂ ನಿಯೋಗದೊಂದಿಗೆ ಯುನೈಟೆಡ್ ಪೀಸ್ ಫಡರೇಶನ್ ಸಮ್ಮೇಳನದಲ್ಲಿ ಭಾಗವಹಿಸಲು ಶಾಜಿಯಾ ಇಲ್ಮಿ ಸಿಯೋಲ್;ಗೆ ತೆರಳಿದ್ದರು. ಸಮ್ಮೇಳನದ ಬಳಿಕ ಭಾರತದ ರಾಯಭಾರಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಕೆಲವರು ಶಾಜಿಯಾ ಇಲ್ಮಿ ಹಾಗೂ ಇತರ ಭಾರತೀಯರನ್ನು ಪಾಕಿಸ್ತಾನ ಧ್ವಜದೊಂದಿಗೆ ಸುತ್ತುವರೆದರು.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ವಿರೋಧಿ ಘೋಷಣೆ ಕೂಗಿದ ಪಾಕಿಸ್ತಾನಿಯರನ್ನು ಶಾಜಿಯಾ ಇಲ್ಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಮತ್ತೊಂದು ದೇಶದ ನೆಲದಲ್ಲಿ ನಿಂತು ಇನ್ನೊಂದು ದೇಶವನ್ನು ಮತ್ತು ಅದರ ಮುಖ್ಯಸ್ಥರ ವಿರುದ್ಧ ಘೋಷಣೆ ಕೂಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಭಾರತದ ಪ್ರಧಾನಿಯನ್ನು ನಿಂದಿಸಬೇಡಿ ಎಂದು ಮನವಿ ಮಾಡಿದ ಶಾಜಿಯಾ, ಇಡೀ ಗುಂಪಿನ ವಿರುದ್ಧ ಏಕಾಂಗಿಯಾಗಿ ಧ್ವನಿ ಎತ್ತಿದ ವಿರೋಧಿ ಇದೀಗ ಭಾರೀ ವೈರಲ್ ಆಗಿದೆ.