Asianet Suvarna News Asianet Suvarna News

ಥಳಿಸಿ ಹತ್ಯೆ ಮಾಡುವ ಚಾಳಿ ದೇಶಾದ್ಯಂತ ಹರಡುತ್ತಿದೆ: ಬಿಜೆಪಿ ನಾಯಕ ಕಳವಳ

ದೇಶದಲ್ಲಿ ಥಳಿಸಿ ಹತ್ಯೆಗೈಯುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಬಿಜೆಪಿ ನಾಯಕ ಶತ್ರುಘ್ನಾ ಸಿನ್ಹಾ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿ ಥಳಿಸಿ ಹತ್ಯೆಗೈಯುವ ಘಟನೆಗಳು ಖಂಡನಾರ್ಹ, ದೇಶಾದ್ಯಂತ ಈ ಹೊಸ ಚಾಳಿ ಹರಡುತ್ತಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕದಿದ್ದರೆ ಭಾರೀ ಸಮಸ್ಯೆಯಾಗಲಿದೆ ಎಂದಿದ್ದಾರೆ.

Shatrughan Sinha The condemnation of mob attacks is a case of too little too late
  • Facebook
  • Twitter
  • Whatsapp

ದೇಶದಲ್ಲಿ ಥಳಿಸಿ ಹತ್ಯೆಗೈಯುವ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಬಿಜೆಪಿ ನಾಯಕ ಶತ್ರುಘ್ನಾ ಸಿನ್ಹಾ ಕಳವಳ ವ್ಯಕ್ತಪಡಿಸಿದ್ದಾರೆ.

ಈ ರೀತಿ ಥಳಿಸಿ ಹತ್ಯೆಗೈಯುವ ಘಟನೆಗಳು ಖಂಡನಾರ್ಹ, ದೇಶಾದ್ಯಂತ ಈ ಹೊಸ ಚಾಳಿ ಹರಡುತ್ತಿದೆ. ಇದಕ್ಕೆ ತಕ್ಷಣ ಕಡಿವಾಣ ಹಾಕದಿದ್ದರೆ ಭಾರೀ ಸಮಸ್ಯೆಯಾಗಲಿದೆ. ಮುಂದೆ ಯಾರು ಏನನ್ನು ತಿನ್ನಬೇಕು ಏನನ್ನು ತೊಡಬೇಕೆಂಬುವುದನ್ನು ದುಷ್ಕರ್ಮಿಗಳ ಗುಂಪೇ ನಿರ್ಧರಿಸಬಹುದು ಎಂದು ಸಿನ್ಹಾ ಹೇಳಿದ್ದಾರೆ.

ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸದೇ, ಥಳಿಸಿ ಹತ್ಯೆಗೈಯುವ ಚಾಳಿಗೆ ವ್ಯಕ್ತವಾಗಿರುವ ಖಂಡನೆ ಬಹಳ ಕಡಿಮೆ ಹಾಗೂ ತುಂಬಾ ವಿಳಂಬವಾಗಿದೆ, ಇನ್ನೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆಯೆಂದು ಸಿನ್ಹಾ ಹೇಳಿದ್ದಾರೆ.

ನಾನು ಹಿಂದೂವಾಗಿರುವುದಕ್ಕೆ ಹೆಮೆಯಿದೆ. ಆದರೆ ಇಂತಹ ಘಟನೆಗಳಿಂದ ನೊಂದಿದ್ದೇನೆ ಎಂದಿರುವ ಸಿನ್ಹಾ, ನಾವೆಲ್ಲರೂ ಮೊದಲು ಭಾರತೀಯರು, ಬಳಿಕ ಹಿಂದೂ ಹಾಗೂ ಮುಸ್ಲಿಮರಾಗಿದ್ದೇವೆ ಎಂದು ಹೇಳಿದ್ದಾರೆ.

ಈದ್ ಸಂದರ್ಭದಲ್ಲೇ ಭಾರತೀಯನೇ ಆಗಿರುವ ಅಮಾಯಕ ಬಾಲಕ ಜುನೈದ್’ನನ್ನು ಥಳಿಸಿ ಹತ್ಯೆಗೈಯ್ಯಲಾಗಿದೆ.  ಆತ ಮಾಡಿದ ತಪ್ಪಾದರೂ ಏನು? ಎಂದು ಅವರು ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios