ಕಳೆದ ಶನಿವಾರ ಗೋವಾದಲ್ಲಿ ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೆಣ್ಣಿನ ವಿರುದ್ಧ ನಡೆಯುವ ದೌರ್ಜನ್ಯಗಳಿಗೆ ಸಿನೆಮಾಗಳೂ ಕಾರಣವೆಂದು ಮನೇಕಾ ಗಾಂಧಿ ಹೇಳಿದ್ದರು. ಪ್ರಾದೇಶಿಕ ಚಿತ್ರವಾಗಿರಲಿ ಅಥವಾ ಹಿಂದಿ ಚಿತ್ರವಾಗಿರಲಿ, ಅದರಲ್ಲಿ ನಾಯಕ-ನಾಯಕಿ ಮಧ್ಯೆ ಪ್ರೇಮ ಉಂಟಾಗುವುದು ಹೆಣ್ಣಿನ ಚುಡಾವಣೆಯಿಂದಲೇ ಎಂದ ಮನೇಕಾ ಗಾಂಧಿ ಹೇಳಿದ್ದರು.

ನವದೆಹಲಿ (ಏ.09): ಮಹಿಳೆಯರ ವಿರುದ್ಧ ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ ಸಿನೆಮಾಗಳು ಕಾರಣವೆಂದಿದ್ದ ಕೇಂದ್ರ ಸಚಿವೆ ಮನೇಕಾ ಗಾಂಧಿ ಮೇಲೆ ಬಿಜಪಿ ನಾಯಕ ಶತ್ರುಘನ್ ಸಿನ್ಹಾ ಟ್ವೀಟರ್ ದಾಳಿ ನಡೆಸಿದ್ದಾರೆ.

ಮನೆಕಾ ಗಾಂಧಿಯವರು ಸರಿಯಾದ ಜನರನ್ನು ಸಮಾಲೋಚಿಸಿ, ಸರಿಯಾದ ಸಮಯದಲ್ಲಿ, ಸರಿಯಾದ ವಿಷಯವನ್ನು ಮಾತನಾಡಬೇಕು. ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು, ಅಪರಾಧಗಳಿಗೆ ಸಿನೆಮಾಗಳನ್ನು ಹೊಣೆಯಾಗಿಸುವ ಹೊರತು ಬೇರೆ ರೀತಿಯ ದಾರಿಗಳಿವೆ ಎಂದು ಖಾರವಾಗಿ ಶತ್ರುಘನ್ ಸಿನ್ಹಾ ಸರಣಿ ಟ್ವೀಟ್’ಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…

ಮುಂದುವರಿದು, ಭ್ರಷ್ಟಾಚಾರಕ್ಕೆ ಕಾರಣ ರಾಜಕಾರಣಿಗಳೋ ಅಥವಾ ಸಿನೆಮಾಗಳೋ ಎಂದುಪ್ರಶ್ನಿಸಿರುವ ಸಿನ್ಹಾ, ಭಯೋತ್ಪಾದನೆ, ಲೈಂಗಿಕ ದೌರ್ಜನ್ಯ, ದೇಶ-ವಿರೋಧಿ ಮನಸ್ಥಿತಿ, ಏರ್’ಲೈನ್ ಅಧಿಕಾರಿ ಮೇಲೆ ಹಲ್ಲೆ, ಗಲಭೆಗಳ ಬಗ್ಗೆ ಏನನ್ನುತ್ತೀರಿ? ಎಂದು ಸಿನ್ಹಾ ಮನೆಕಾ ಗಾಂಧಿಯವರನ್ನು ಕೇಳಿದ್ದಾರೆ.

ಹಾಗಾದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪಿಂಕ್, ದಂಗಾಲ್ ಚಿತ್ರಗಳ ಬಗ್ಗೆ? ಸಿನೆಮಾಗಳನ್ನು ಬಲಿಪಶು ಮಾಡುವುದು ಬೇಡ ಎಂದು ಸಿನ್ಹಾ ಮನೆಕಾ ಗಾಂಧಿಗೆ ಮನವಿ ಮಾಡಿದ್ದಾರೆ.