ನೃತ್ಯ ನಿರ್ದೇಶಕಿ ಸರೋಜ್ ಖಾನ್, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ, ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಕೂಡ ಲೈಂಗಿಕ ಒಲಿವಿನ ‘ಕೊಡುಕೊಳ್ಳುವಿಕೆ’ ಎಂಬುದು ಸಿನೆಮಾ ಹಾಗೂ ರಾಜಕೀಯ ಎರಡೂ ಜಗತ್ತಿನಲ್ಲೂ ಇದೆ ಎಂದು ಹೇಳಿದ್ದಾರೆ.
ನವದೆಹಲಿ: ನೃತ್ಯ ನಿರ್ದೇಶಕಿ ಸರೋಜ್ ಖಾನ್, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ, ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಕೂಡ ಲೈಂಗಿಕ ಒಲಿವಿನ ‘ಕೊಡುಕೊಳ್ಳುವಿಕೆ’ ಎಂಬುದು ಸಿನೆಮಾ ಹಾಗೂ ರಾಜಕೀಯ ಎರಡೂ ಜಗತ್ತಿನಲ್ಲೂ ಇದೆ ಎಂದು ಹೇಳಿದ್ದಾರೆ.
ರೇಣುಕಾ ಚೌಧರಿ, ಸರೋಜ್ ಖಾನ್ ಹೇಳಿಕೆ ಸಮರ್ಥಿಸಿ ಮಾತನಾಡಿದ ಅವರು, ‘ಇಬ್ಬರ ಹೇಳಿಕೆಗಳು ತಪ್ಪಲ್ಲ. ಸರೋಜ್ ಖಾನ್, ಒಂದು ವೇಳೆ ಬಾಲಿವುಡ್‌ನಲ್ಲಿ ಮಹಿಳೆಯರು ಲೈಂಗಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದಿದ್ದರೆ, ಪ್ರಸ್ತುತ ಏನು ನಡೆಯುತ್ತಿದೆ ಎಂಬ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದರ್ಥ’ ಎಂದಿದ್ದಾರೆ.
ಕಾಸ್ಟಿಂಗ್ ಕೌಚ್ ಅಸ್ತಿತ್ವವನ್ನು ಅಲ್ಲಗಳೆಯದೆ, ‘ಹೊಂದಾಣಿಕೆಯ ಕಾಸ್ಟಿಂಗ್ ಕೌಚನ್ನು ನಾನು ಬೆಂಬಲಿಸುತ್ತಿಲ್ಲ. ಆದರೆ ಇದೇ ವಾಸ್ತವ. ಹಾಗಾಗಿ ಸರೋಜ್ ಖಾನ್ ಹೇಳಿದ ಸತ್ಯವನ್ನು ಖಂಡಿಸುವುದು ಸರಿಯಲ್ಲ. ಖಂಡಿಸುವುದಾದರೆ ಇಂಥಹ ಸನ್ನಿವೇಶ ಸೃಷ್ಟಿಸುವವರನ್ನು ಖಂಡಿಸಿ. ಅಂತಿಮವಾಗಿ ಕಾಸ್ಟಿಂಗ್ ಕೌಚ್ ಎನ್ನುವುದು ವೈಯಕ್ತಿಕ ಆಯ್ಕೆ’ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
