ಗಾಂಜಾ ‘ಲೀಗಲ್’ ಮಾಡಿಬಿಡಿ: ತರೂರ್ ವರಸೆ..!

Shashi Tharoor wants India to legalise Marijuana
Highlights

ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯದಿಂದ ಸಮನ್ಸ್ ಪಡೆದಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ದೇಶದಲ್ಲಿ ಗಾಂಜಾ ಸೇವನೆಯನ್ನು ಕಾನೂನುಬದ್ದಗೊಳಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ನವದೆಹಲಿ(ಜೂ.5): ಯುವಕರನ್ನು ದುಶ್ಚಟಗಳಿಂದ ಹೇಗೆ ಮುಕ್ತಿ ಮಾಡಬೇಕು ಎಂದು ಸರ್ಕಾರಗಳು ತಲೆ ಕೆಡಿಸಿಕೊಳ್ಳುತ್ತಿದ್ದರೆ, ಇತ್ತ ಕಾಂಗ್ರೆಸ್ ನಾಯಕ ಶಶಿ ತರೂರ್, ದೇಶದಲ್ಲಿ ಗಾಂಜಾ ಸೇವನೆಯನ್ನು ಕಾನೂನುಬದ್ದಗೊಳಿಸಬೇಕು ಎಂಬ ವಿಚಿತ್ರ ಬೇಡಿಕೆಯನ್ನು ಮಂಡಿಸಿದ್ದಾರೆ.

ದೇಶದಲ್ಲಿ ಗಾಂಜಾ ಸೇವನೆಯನ್ನು ಕಾನೂನುಬದ್ದಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿರುವ ತರೂರ್, ಇದರಿಂದ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಲಿದೆ ಎಂಬ ವಿಚಿತ್ರ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಗಾಂಜಾ ಸೇವನೆಯಿಂದ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ ಎಂದು ಹೇಳಿರುವ ಅವರು, ಭ್ರಷ್ಟಾಚಾರ ನಿರ್ಮೂಲನೆಗೆ ಇದು ಸಹಾಯ ಮಾಡಲಿದೆ ಎಂದಿದ್ದಾರೆ.

ದೇಶದಲ್ಲಿ ಗಾಂಜಾ ಅಕ್ರಮವಾಗಿ ಮಾರಾಟವಾಗುತ್ತಿದ್ದು, ಇದರ ಸೇವನೆ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಕಾನೂನುಬದ್ದಗೊಳಿಸುವುದರಿಂದ ಲಾಭವೇ ಹೆಚ್ಚು ಎಂದು ತರೂರ್ ಹೇಳಿದ್ದಾರೆ. 
 

loader