ದೆಹಲಿ ಪೊಲೀಸರು 2015, ಜನವರಿ 1ರಂದು ಅಪರಿಚಿತ ವ್ಯಕ್ತಿಗಳು ಕೊಲೆ ಮಾಡಿದ ಹಿನ್ನಲೆಯಲ್ಲಿ ದೂರು ದಾಖಲಿಸಿಲಾಗಿತ್ತು. ಕೇಂದ್ರ ಸಚಿವರಾಗಿದ್ದ ಶಶಿ ತರೂರು ಕಾಶ್ಮೀರಿ ಮೂಲದ ಸೌಂದರ್ಯ ತಜ್ಞೆ ಸುನಂದ ಪುಷ್ಕರ್ ಅವರನ್ನು ಆಗಸ್ಟ್ 22, 2010ರಲ್ಲಿ ವಿವಾಹವಾಗಿದ್ದರು. ಒಂದೆರಡು ವರ್ಷಗಳ ನಂತರ ಇಬ್ಬರ ನಡುವೆ ಮನಸ್ತಾಪ ಎದುರಾಗಿತ್ತು.
ನವದೆಹಲಿ(ಮೇ.14): ಸುನಂದ ಪುಷ್ಕರ್ ಆತ್ಮಹತ್ಯೆಗೆ ಶಶಿ ತರೂರ್ ಪ್ರಚೋದನೆ ನೀಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ ದೆಹಲಿ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದಾರೆ.
ತರೂರ್ ವಿರುದ್ಧ ಐಪಿಸಿ ಸೆಕ್ಷನ್ 498 ಎ(ಕುಟುಂಬಸ್ಥರು ಗಾಯಗೊಳಿಸುವುದು) ಹಾಗೂ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿ ದೂರು ದಾಖಲಿಸಲಾಗಿದೆ. ದೆಹಲಿಯ ಪ್ರತಿಷ್ಠಿತ ಹೋಟೆಲ್'ನಲ್ಲಿ ಸುನಂದ ಅವರು ಜನವರಿ 17, 2014ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.
ಹೊಟೇಲ್‌ವೊಂದರಲ್ಲಿ ಸುನಂದಾ ಶವ ಅನುಮಾನಸ್ಪಾದವಾಗಿ ದೊರೆತ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಕೇಂದ್ರ ಸಚಿವರಾಗಿದ್ದ ಶಶಿ ತರೂರು ಕಾಶ್ಮೀರಿ ಮೂಲದ ಸೌಂದರ್ಯ ತಜ್ಞೆ ಸುನಂದ ಪುಷ್ಕರ್ ಅವರನ್ನು ಆಗಸ್ಟ್ 22, 2010ರಲ್ಲಿ ವಿವಾಹವಾಗಿದ್ದರು. ಒಂದೆರಡು ವರ್ಷಗಳ ನಂತರ ಇಬ್ಬರ ನಡುವೆ ಮನಸ್ತಾಪವಿತ್ತು.
ಪ್ರಕರಣದಲ್ಲಿ ಕ್ಲೀನ್ ಚಿಟ್ ಕೊಟ್ಟ ನಂತರವೂ ರಾಜಕೀಯ ದುರುದ್ದೇಶದ ಕಾರಣದಿಂದ ತನ್ನ ಮೇಲೆ ಚಾರ್ಜ್ಶೀಟ್ ದಾಖಲಿಸಿದೆ, ಎಂದು ತರೂರ್ ಆರೋಪಿಸಿದ್ದಾರೆ. ಯಾವ ಸಾಕ್ಷ್ಯಾಧಾರಗಳೂ ಇಲ್ಲದಿದ್ದರೂ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಗಿ ಆರೋಪಿಸುತ್ತಿದ್ದಾರೆಂದು ತರೂರ್ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ಹಾಗೂ ಇತರೆ ಲಭ್ಯವಾದ ಸಾಕ್ಷಿಗಳ ಆಧಾರದ ಮೇಲೆ ತರೂರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ, ಎಂದು ದಿಲ್ಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
