ಶರವಣಗೆ ಸಿಗುತ್ತಾ ಮಂತ್ರಿ ಸ್ಥಾನ ..?

Sharavana Also An Aspirant For Minister Position
Highlights

ಮೊದಲ ಬಾರಿ ವಿಧಾನಪರಿಷತ್ ಸದಸ್ಯರಾಗಿರುವ ಪಕ್ಷದ ರಾಜ್ಯ ಉಪಾಧ್ಯಕ್ಷ ಟಿ.ಎ.ಶರವಣ ಅವರಿಗೆ ಸಚಿವ ಸ್ಥಾನ ಸಿಗಬಹುದಾ ಎಂಬ ಕುತೂಹಲ ಮೂಡಿದೆ.
 

ಬೆಂಗಳೂರು : ಮೊದಲ ಬಾರಿ ವಿಧಾನಪರಿಷತ್ ಸದಸ್ಯರಾಗಿರುವ ಪಕ್ಷದ ರಾಜ್ಯ ಉಪಾಧ್ಯಕ್ಷ ಟಿ.ಎ.ಶರವಣ ಅವರಿಗೆ ಸಚಿವ ಸ್ಥಾನ ಸಿಗಬಹುದಾ ಎಂಬ ಕುತೂಹಲ ಮೂಡಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತವರ ಕುಟುಂಬಕ್ಕೆ ಆಪ್ತರಾಗಿರುವ ಹಾಗೂ ಅವರ ಕುಟುಂಬದ ಭಾಗದಂತೇ ಆಗಿರುವ ಶರವಣ ಅವರಿಗೆ ಸಚಿವ ಸ್ಥಾನ ನೀಡುವುದಾದರೆ ಯಾವ ಕೋಟಾದಲ್ಲಿ ನೀಡಬೇಕು ಎಂಬ ಪ್ರಶ್ನೆಯೂ ಎದುರಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಪಕ್ಷದ ಹಲವು ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಶರವಣ ಅವರು ಪಕ್ಷದ ಚಟುವಟಿಕೆಗಳಿಗೆ ಸಾಕಷ್ಟು ಆರ್ಥಿಕ ನೆರವನ್ನೂ ನೀಡಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆರ್ಯವೈಶ್ಯ ಸಮುದಾಯಕ್ಕೆ ಸೇರಿದ ಅವರು ವಿಧಾನಸಭಾ ಸದಸ್ಯರಲ್ಲ. 

ಅವರು ವಿಧಾನ ಪರಿಷತ್ ಸದಸ್ಯರು. ಅದೂ ಮೊದಲ ಬಾರಿ ಎಂಬುದು ಹಿನ್ನಡೆಯಾಗುವ ಸಾಧ್ಯತೆಯಿದೆ. ಆದರೆ, ದೇವೇಗೌಡರು ನಿರ್ಧಾರ ಕೈಗೊಂಡಲ್ಲಿ ಶರವಣ ಅವರಿಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಶರವಣ ಅವರು ಕೊಡುವುದಾದರೆ ಸಚಿವ ಸ್ಥಾನವನ್ನೇ ಕೊಡಿ. ನಿಗಮ ಮಂಡಳಿಗಳ ಅಧ್ಯಕ್ಷಗಿರಿ ಅಥವಾ ಸಂಸದೀಯ ಕಾರ್ಯ ದರ್ಶಿಯಂಥ ಪರ್ಯಾಯ ಸ್ಥಾನಮಾನ ಬೇಡ ಎಂಬ ಮಾತನ್ನು ಪಕ್ಷದ ವರಿಷ್ಠರ ಬಳಿ ಹೇಳಿದ್ದಾರೆ ಎನ್ನಲಾಗಿದೆ.

loader