ಕಿಡ್ನ್ಯಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶರತ್ 8 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಶರತ್ ಅಕ್ಕನ ಪ್ರಿಯಕರ ವಿಶಾಲ್ ಆತನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದನೆಂಬ ವಿಚಾರ ಬಾಯ್ಬಿಟ್ಟಿದ್ದರು. ಆದರೀಗ ಮಾಹಿತಿಯ ಬೆನ್ನಲ್ಲೇ ಶರತ್ ಕಿಡ್ನ್ಯಾಪ್ ವಿಚಾರ ತನ ಅಕ್ಕನಿಗೆ ತಿಳಿದಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.
ಬೆಂಗಳೂರು(ಸೆ.22): ಕಿಡ್ನ್ಯಾಪ್ ಆಗಿದ್ದ ಐಟಿ ಅಧಿಕಾರಿ ಪುತ್ರ ಶರತ್ 8 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಶರತ್ ಅಕ್ಕನ ಪ್ರಿಯಕರ ವಿಶಾಲ್ ಆತನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದನೆಂಬ ವಿಚಾರ ಬಾಯ್ಬಿಟ್ಟಿದ್ದರು. ಆದರೀಗ ಮಾಹಿತಿಯ ಬೆನ್ನಲ್ಲೇ ಶರತ್ ಕಿಡ್ನ್ಯಾಪ್ ವಿಚಾರ ತನ ಅಕ್ಕನಿಗೆ ತಿಳಿದಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.
ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಾದ ಬಳಿಕ ಒಂದರಂತೆ ಶಾಕಿಂಗ್ ಮಾಹಿತಿಗಳು ಲಭ್ಯವಾಗುತ್ತಿವೆ. ಸದ್ಯ ಶರತ್ ಕೊಲೆ ಆರೋಪಿ ವಿಶಾಲ್ ಜೊತೆ ಶರತ್ ಅಕ್ಕ ನಿರಂತರ ಸಂಪರ್ಕದಲ್ಲಿದ್ದಳು. ಅಲ್ಲದೇ ಪೊಲೀಸರು ವಿಚಾರಣೆ ನಡೆಸಿದಾಗಲೂ ಆಕೆ ಮೌನವಾಗಿದ್ದಳು. ಆದರೆ ವಿಶಾಲ್ ವಿಶಾಲ್ ಕಾಲ್ ಡಿಟೈಲ್ಸ್ ಪರಿಶೀಲಿಸಿದಾಗ ಕುರಿತಾಗಿ ಲಭ್ಯವಾದ ಸುಳಿವಿನಿಂದ ವಿಚಾರ ಬಹಿರಂಗಗೊಂಡಿದೆ. ಈ ಮೂಲಕ ತನ್ನ ತಮ್ಮನ ಕಿಡ್ನ್ಯಾಪ್ ರಹಸ್ಯ ಅಕ್ಕನಿಗೂ ಗೊತ್ತಿತ್ತು ಎಂಬುವುದು ಸ್ಪಷ್ಟವಾಗಿದೆ.
ಅಲ್ಲದೇ ಆರೋಪಿ ವಿಶಾಲ್ ನಿನ್ನೆವರೆಗೂ ಶರತ್ ಮನೆಗೆ ಬಂದು ಹೋಗುತ್ತಿದ್ದ. ಶರತ್ ಮನೆಯವರಿಗೆ ವಿಶಾಲ್ ಪರಿಚಯ ಮೊದಲಿನಿಂದಲೂ ಇತ್ತು. ಅಲ್ಲದೇ ಶರತ್ ಪೋಷಕರ ಬಳಿ ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಸುಳ್ಳು ಶರತ್ ಹೇಳಿದ್ದ ಮೂಲಕ ಪೊಲೀಸರು ತನ್ನ ವಿಚಾರಣೆ ಮಾಡದಂತೆ ನೋಡಿಕೊಳ್ಳಿ ಎಂದೂ ತಿಳಿಸಿದ್ದನಂತೆ.
