ಸೂಚಿಸದಿದ್ರೂ ಇ.ಡಿ. ಕಚೇರಿಗೆ ಹೊರಟು ಕಡೆಗೆ ಹಿಂದೆ ಸರಿದ ಪವಾರ್‌!| ನಿಮ್ಮ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದ ಜಾರಿ ನಿರ್ದೇಶನಾಲಯ

ಮುಂಬೈ[ಸೆ.28]: ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 25 ಸಾವಿರ ಕೋಟಿ ರು. ಹಗರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಜಾರಿ ನಿರ್ದೇಶನಾಲಯ ಸೂಚನೆ ನೀಡದ ಹೊರತಾಗಿಯೂ ಸಂಸ್ಥೆಯ ಕಚೇರಿಗೆ ಸ್ವಯಂ ಭೇಟಿ ನೀಡುವ ನಿರ್ಧಾರವನ್ನು ಶುಕ್ರವಾರ ಕೈಗೊಂಡಿದ್ದರು.

‘ಪಾಕಿಸ್ತಾನಿಯರ ವಿರುದ್ಧ ಷಡ್ಯಂತ್ರ: 370 ರದ್ದತಿಯೊಂದು ಕುತಂತ್ರ’!

ಆದರೆ ಇಂಥ ಬೆಳವಣಿಗೆ ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗಬಹುದು ಎಂದು ಪೊಲೀಸರ ಮನವಿ ಅನ್ವಯ, ಅಂತಿಮ ಹಂತದಲ್ಲಿ ಇಡಿ ಕಚೇರಿಗೆ ಭೇಟಿ ನೀಡುವ ನಿರ್ಧಾರದಿಂದ ಹಿಂದಕ್ಕೆ ಸರಿದರು.

ಪರ್ರಿಕರ್ ರಕ್ಷಣಾ ಖಾತೆ ತೊರೆದಿದ್ದೇಕೆ? ಪವಾರ್ ಹೇಳಿದ್ದೇನು?

ಈ ನಡುವೆ ಜಾರಿ ನಿರ್ದೇಶನಾಲಯ ಕೂಡ ಶರದ್‌ ಪವಾರ್‌ಗೆ ಇ- ಮೇಲ್‌ವೊಂದನ್ನು ಕಳುಹಿಸಿ ಸದ್ಯ ನಿಮ್ಮ ವಿಚಾರಣೆ ನಡೆಸುವ ಅಗತ್ಯವಿಲ್ಲ. ವಿಚಾರಣೆ ಅಗತ್ಯಬಿದ್ದರೆ ತಿಳಿಸುತ್ತೇವೆ ಎಂದು ತಿಳಿಸಿದೆ.