ಪರ್ರಿಕರ್ ರಕ್ಷಣಾ ಖಾತೆಗೆ ರಾಜೀನಾಮೆ ನೀಡಿದ್ದ ವಿಚಾರವಾಗಿ ಶರದ್ ಪವಾರ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾಋಎ. ಅಷ್ಟಕ್ಕೂ ಪವಾರ್ ಹೇಳಿದ್ದೇನು? ಇಲ್ಲಿದೆ ವಿವರ

ಕೊಲ್ಲಾಪುರ[ಏ.14]: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ವಿರೋಧ ಹೊಂದಿದ್ದ ಮನೋಹರ್‌ ಪರ್ರಿಕರ್‌, ಇದೇ ಕಾರಣಕ್ಕಾಗಿ ರಕ್ಷಣಾ ಸಚಿವ ಹುದ್ದೆಗೆ ರಾಜೀನಾಮೆ ನೀಡಿ ಗೋವಾ ರಾಜಕೀಯಕ್ಕೆ ಮರಳಿದರು ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿಕೆ ನೀಡಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್‌, ರಫೇಲ್‌ ಖರೀದಿ ಮಾಡಿಕೊಂಡ ರೀತಿಗೆ ಪರ್ರಿಕರ್‌ ವಿರೋಧ ಹೊಂದಿದ್ದರು. ಈ ಕಾರಣಕ್ಕಾಗಿಯೇ ಅವರು ಕೇಂದ್ರ ರಾಜಕಾರಣಕ್ಕೆ ವಿದಾಯ ಹೇಳಿ, ಗೋವಾಕ್ಕೆ ಬಂದು ಸಿಎಂ ಹುದ್ದೆ ವಹಿಸಿಕೊಂಡರು ಎಂದು ಹೇಳಿದ್ದಾರೆ.

ಸದ್ಯ ಪವಾರ್ ಈ ಆರೋಪ ಭಾರೀ ಸಂಚಲನ ಮೂಡಿಸಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28