ಬೆಳಗಾವಿ, ಭಾಲ್ಕಿ, ಬೀದರ್ ಮರಾಠಿಗರ ಹಕ್ಕು : ಮತ್ತೆ ಕನ್ನಡಿಗರನ್ನು ಕೆಣಕಿದ ಪವಾರ್

news | Sunday, April 1st, 2018
Suvarna Web Desk
Highlights

ನಗರದಲ್ಲಿ ಶನಿವಾರ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಆಯೋಜಿಸಿದ್ದ ಸಮಾವೇಶ (ಮಹಾಮೇಳಾವ್) ದಲ್ಲಿ 34 ವರ್ಷಗಳ ಬಳಿಕ ಪಾಲ್ಗೊಂಡು ಮಾತನಾಡಿದ ಅವರು, ಬೆಳಗಾವಿ, ನಿಪ್ಪಾಣಿ, ಬೀದರ್, ಭಾಲ್ಕಿ ಅತ್ಯಂತ ಮಹತ್ವದ ಪ್ರದೇಶಗಳು.

ಬೆಳಗಾವಿ: ಗಡಿ ಭಾಗದ ಬೆಳಗಾವಿ, ನಿಪ್ಪಾಣಿ, ಬೀದರ್, ಭಾಲ್ಕಿ ಸೇರಿದಂತೆ ಇನ್ನಿತರ ಪ್ರದೇಶಗಳು ಸ್ವಾಭಿಮಾನಿ ಮರಾಠಿಗರ ಹಕ್ಕು. ಬೇಡಿಕೆ ಈಡೇರಿಕೆಗೆ ಕೊನೆಯವರೆಗೂ ಪ್ರಯತ್ನಿಸುತ್ತೇನೆ ಎಂದು ಹೇಳುವ ಮೂಲಕ ಕೇಂದ್ರದ ಮಾಜಿ ಕೃಷಿ ಸಚಿವ ಶರದ್ ಪವಾರ್ ಅವರೂ ಕನ್ನಡಿಗರನ್ನು ಕೆಣಕುವ ಯತ್ನ ಮಾಡಿದ್ದಾರೆ.

ನಗರದಲ್ಲಿ ಶನಿವಾರ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಆಯೋಜಿಸಿದ್ದ ಸಮಾವೇಶ (ಮಹಾಮೇಳಾವ್) ದಲ್ಲಿ 34 ವರ್ಷಗಳ ಬಳಿಕ ಪಾಲ್ಗೊಂಡು ಮಾತನಾಡಿದ ಅವರು, ಬೆಳಗಾವಿ, ನಿಪ್ಪಾಣಿ, ಬೀದರ್, ಭಾಲ್ಕಿ ಅತ್ಯಂತ ಮಹತ್ವದ ಪ್ರದೇಶಗಳು. ಈ ಭಾಗಗಳ ಮರಾಠಿಗರ ಸ್ವಾಭಿಮಾನದ ಬದುಕಿಗೆ ಅನುಕೂಲ ಮಾಡಿಕೊಡು ವವರೆಗೂ ನಾವು ಸುಮ್ಮನಿರುವುದಿಲ್ಲ. ರಾಜ್ಯಗಳ ಪುನರ್ ವಿಂಗಡಣೆಯಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶ ಮಹಾರಾಷ್ಟ್ರದಿಂದ ದೂರವಾಗಿದೆ ಎಂದರು.

ಕರ್ನಾಟಕ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಂಇಎಸ್ ಅಥವಾ ಮರಾಠಿ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಬೇಕು. ಇದು ಸುಪ್ರೀಂ ಕೋರ್ಟ್‌ನಲ್ಲಿ ಸಾಕ್ಷಿಯಾಗುತ್ತದೆ ಎಂದರು.

Comments 0
Add Comment

  Related Posts

  UT Khader reacts kaldka statement

  video | Friday, April 6th, 2018

  UT Khader reacts kaldka statement

  video | Friday, April 6th, 2018

  Anup Bhandari React about Controversial Statement

  video | Tuesday, April 3rd, 2018

  Anup Bhandari React about Controversial Statement

  video | Tuesday, April 3rd, 2018

  UT Khader reacts kaldka statement

  video | Friday, April 6th, 2018
  Suvarna Web Desk