ಮಳೆ ಸುರಿಯುತ್ತಿದ್ದರೂ ಭಾಷಣ ನಿಲ್ಲಿಸದ ಪವಾರ್‌!| ವಿಧಾನಸಭಾ ಚುನಾವಣೆ ಹಾಗೂ ಸತಾರಾ ಲೋಕಸಭಾ ಉಪಚುನಾವಣೆ ನಿಮಿತ್ತ ನಡೆದ ಸಮಾವೇಶದಲ್ಲಿ ಭಾಷಣ| ವಿಡಿಯೋ ವೈರಲ್

ಸತಾರಾ[ಅ.20]: ಎನ್‌ಸಿಪಿ (ರಾಷ್ಟ್ರವಾದಿ ಕಾಂಗ್ರೆಸ್‌ ಪಕ) ಮುಖ್ಯಸ್ಥ ಶರದ್‌ ಪವಾರ್‌ (78) ಅವರು ಶುಕ್ರವಾರ ರಾತ್ರಿ ಇಲ್ಲಿ ಸುರಿಯುತ್ತಿರುವ ಮಳೆಯಲ್ಲೇ ಪ್ರಚಾರ ಭಾಷಣ ಮಾಡಿ ಗಮನ ಸೆಳೆದರು.

ಅ.21ರ ವಿಧಾನಸಭಾ ಚುನಾವಣೆ ಹಾಗೂ ಸತಾರಾ ಲೋಕಸಭಾ ಉಪಚುನಾವಣೆ ನಿಮಿತ್ತ ಇಲ್ಲಿ ನಡೆದ ಎನ್‌ಸಿಪಿ ಪ್ರಚಾರ ರಾರ‍ಯಲಿಯಲ್ಲಿ ಪವಾರ್‌ ಅವರು ವೇದಿಕೆಯನ್ನೇರಿ ಮಾತನಾಡುತ್ತಿರುವಾಗ ಮಳೆ ಸುರಿಯಲು ಆರಂಭಿಸಿತು. ಆದರೆ ಅವರು ಭಾಷಣ ನಿಲ್ಲಿಸಲಿಲ್ಲ. ಪೂರ್ತಿ ತೋಯ್ದು ತೊಪ್ಪೆಯಾದರೂ, ಭಾಷಣ ಮುಂದುವರಿಸಿದರು. ಆಗ ಅವರ ಪರ ಕಾರ್ಯಕರ್ತರ ಜೈಘೋಷಗಳು ಮೊಳಗಿದವು. ಅವರ ಈ ವಿಡಿಯೋ ವೈರಲ್‌ ಆಗಿದೆ.

ಈ ವೇಳೆ ಪವಾರ್‌ ಅವರು, ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಾಜಿ ಮಹಾರಾಜರ ವಂಶಸ್ಥ ಉದಯನ್‌ರಾಜೆ ಭೋಂಸ್ಲೆ ಅವರನ್ನು ಕಣಕ್ಕಿಳಿಸಿ ತಪ್ಪು ಮಾಡಿದೆ. ಆದರೆ ಈಗ ವರುಣ ದೇವನ ಆಗಮನವು ನಮ್ಮನ್ನು ಆಶೀರ್ವದಿಸುತ್ತಿದೆ ಎಂಬುದರ ಸಂಕೇತ’ ಎಂದು ಹೇಳಿದರು.

Scroll to load tweet…

ಭೋಂಸ್ಲೆ ಅವರು 2018ರಲ್ಲಿ ಎನ್‌ಸಿಪಿಯಿಂದ ಗೆದ್ದಿದ್ದರೂ ಇತ್ತೀಚೆಗೆ ಬಿಜೆಪಿ ಸೇರಿ ಈಗ ಆ ಪಕ್ಷದಿಂದಲೇ ಉಪಚುನಾವಣೆ ಅಭ್ಯರ್ಥಿಯಾಗಿದ್ದಾರೆ. ಭೋಂಸ್ಲೆ ಅವರ ಕ್ರಮ ಪವಾರ್‌ರನ್ನು ಸಿಟ್ಟಿಗೆಬ್ಬಿಸಿದೆ.