ಚಿತ್ರದುರ್ಗ(ಸೆ.16): ಚಿತ್ರದುರ್ಗದ ಐನಹಳ್ಳಿ ಕುರುಬರಹಟ್ಟಿ ಗ್ರಾಮ ಪಂಚಾಯ್ತಿಯ ಸದಸ್ಯನೊಬ್ಬ ತನ್ನ ಜಮೀನಿನಲ್ಲಿ ಕೂಲಿ ಮಾಡುವ ಮಹಿಳೆಯರನ್ನೆಲ್ಲಾ ಮಂಚಕ್ಕೆ ಕರೆಯುತ್ತಿದ್ದಾನಂತೆ.

ಈತನಿಗೆ ವೋಟ್​ ಹಾಕಿ ಗೆಲ್ಲಿಸಿದ ಗ್ರಾಮಸ್ಥರೇ ಈತನ ಈ ವರ್ತನೆಯನ್ನ ಸರಿ ಮಾಡಿಕೊಳ್ಳಲು ಹೇಳಿದ್ರೂ ವೆಂಕಟೇಶನ ವರ್ತನೆ ಮಾತ್ರ ಬದಲಾಗಿಲ್ಲವಂತೆ. ಸದ್ಯ ವೆಂಕಟೇಶನ ಕಾಟ ಜಾಸ್ತಿಯಾದಾಗ ಇಡೀ ಗ್ರಾಮವೇ ಆತನ ವಿರುದ್ಧ ತಿರುಗಿ ಬಿದ್ದಿದೆ. ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದೆ. ಸೂಕ್ತ ಕ್ರಮಕೈಗೊಳ್ಳಬೇಕು ಅಂತಾ ಒತ್ತಾಯಿಸಿದೆ.

ಆದ್ರೆ ಪ್ರಕರಣ ದಾಖಲಿಸಿಕೊಂಡು 3-4 ದಿನಗಳು ಕಳೆದ್ರೂ ಗ್ರಾಮಾಂತರ ಪೊಲೀಸರು ವೆಂಕಟೇಶನ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಅನ್ನೋದು ಗ್ರಾಮಸ್ಥರ ಆರೋಪ.