ಶಾಮನೂರು ಶಿವಶಂಕರಪ್ಪ ಬಿಜೆಪಿಗೆ?

First Published 21, Mar 2018, 3:10 PM IST
Shamanuru Shivashankarappa Clarification About BJP Joining Issue
Highlights

ಶಾಮನೂರು ಶಿವಶಂಕರಪ್ಪ ಬಿಜೆಪಿ ಸೇರುವ ವದಂತಿಗೆ ಶಾಮನೂರು  ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಾನು  ಬಿಜೆಪಿ ಸೇರುವುದು ಸುಳ್ಳು. ಇದೆಲ್ಲ ವದಂತಿ. ಯಾರು ಏನೇ ಹೇಳಲಿ ನಾನು ಬಿಜೆಪಿ ಸೇರುವ ಮಾತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. 

ಬೆಂಗಳೂರು (ಮಾ. 21): ಶಾಮನೂರು ಶಿವಶಂಕರಪ್ಪ ಬಿಜೆಪಿ ಸೇರುವ ವದಂತಿಗೆ ಶಾಮನೂರು  ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಾನು  ಬಿಜೆಪಿ ಸೇರುವುದು ಸುಳ್ಳು. ಇದೆಲ್ಲ ವದಂತಿ. ಯಾರು ಏನೇ ಹೇಳಲಿ ನಾನು ಬಿಜೆಪಿ ಸೇರುವ ಮಾತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. 

ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸ್ಸಿನಿಂದ ನನಗೇನು ಬೇಜಾರಾಗಿಲ್ಲ.  ಈ ಬಗ್ಗೆ ಮಾರ್ಚ್ 23 ರಂದು ಸಭೆ ನಡೆಸುತ್ತೇವೆ. ಇವೆಲ್ಲ ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ.

ಬಿಜೆಪಿಯಲ್ಲಿ ಜೈಲಿಗೆ ಹೋಗದವರು ಯಾರಾದರೂ ಇದ್ದರೆ ಬರಲಿ. ಅವರನ್ನೇ ನಾವು ಕಾಂಗ್ರೆಸ್’ಗೆ ಸೇರಿಸಿಕೊಳ್ಳುತ್ತೇವೆ ಎಂದು ಟಾಂಗ್ ನೀಡಿದ್ದಾರೆ. 

loader